ಗದಗ: ನಾಪತ್ತೆಯಾಗಿದ್ದ KRIDL ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಪರ್ವೇಜ್ ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿರುವುದು ತನಿಖೆಗೆ ಮಹತ್ವದ ಸುಳಿವು ನೀಡಿದೆ.
ಪರ್ವೇಜ್ ಗದಗದಿಂದ ಬೆಂಗಳೂರಿಗೆ, ಬಳಿಕ ಆಂಧ್ರಪ್ರದೇಶದ ವಿಜಯವಾಡ ಹಾಗೂ ಅಲ್ಲಿಂದ ಮಧ್ಯಪ್ರದೇಶದ ಭೋಪಾಲ್ಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಮೂಲಕ ಅವರು ಸುಮಾರು 1,200 ಕಿಲೋಮೀಟರ್ಗೂ ಹೆಚ್ಚು ಪ್ರಯಾಣಿಸಿರುವ ಸುಳಿವು ಸಿಕ್ಕಿದೆ.
ವಿಜಯವಾಡ ತಲುಪಿದ ಬಳಿಕ ಪರ್ವೇಜ್ ಅವರ ಮೊಬೈಲ್ ಲೊಕೇಷನ್ ಪತ್ತೆಯಾಗಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಹಾಗೂ ಎಟಿಎಂ ಬಳಕೆಯ ಯಾವುದೇ ಮಾಹಿತಿ ಸಿಗದಿರುವುದರಿಂದ ಪತ್ತೆ ಕಾರ್ಯಕ್ಕೆ ಸವಾಲಾಗಿದೆ. ಇದನ್ನೂ ಓದಿ: ದುಷ್ಕರ್ಮಿಗಳ ಗುಂಡಿನ ದಾಳಿಗೆ ಶಿವಸೇನೆ ನಾಯಕ ಪ್ರದೀಪ್ ಪುರ್ಣೇಕರ್ ಬಲಿ
ಈ ನಡುವೆ ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ಪರ್ವೇಜ್ ಕಾಣಿಸಿಕೊಂಡಿದ್ದಾರೆ. ಅಲ್ಲಿಂದಲೂ ಅವರು ಮತ್ತೊಂದು ಸ್ಥಳಕ್ಕೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.ಇದನ್ನೂ ಓದಿ: ಗದಗ KRIDL ಎಇಇ ನಾಪತ್ತೆ ಕೇಸ್ – ಅಧಿಕಾರಿ ಪತ್ತೆಗಾಗಿ 5 ತಂಡ ರಚನೆ; ವಿಜಯವಾಡದಲ್ಲಿ ಲೊಕೇಷನ್ ಪತ್ತೆ!
ಅಧಿಕಾರಿಯ ಚಲನವಲನದ ಬಗ್ಗೆ ಗದಗ ಪೊಲೀಸರು ನಿಗಾ ವಹಿಸಿದ್ದು, ಭೋಪಾಲ್ ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪರ್ವೇಜ್ ಅವರನ್ನು ಪತ್ತೆಹಚ್ಚಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

