– ಚಿನ್ನದ ಗಟ್ಟಿ, ಅಪರೂಪದ ನಾಣ್ಯ, ಬೆಳ್ಳಿ ಬಾರ್‌ಗಳು ಪತ್ತೆ

ಬ್ರಸೆಲ್ಸ್: ಬೆಲ್ಜಿಯಂನಲ್ಲಿ (Belgium) ಒಳಚರಂಡಿ ಕಾಮಗಾರಿ ವೇಳೆ 18 ವರ್ಷದ ಹುಡುಗನಿಗೆ 98 ಕೋಟಿ ರೂ. ಮೌಲ್ಯದ ನಿಧಿ ಸಿಕ್ಕಿರುವ ಅಚ್ಚರಿದಾಯಕ ಘಟನೆ ನಡೆದಿದೆ.
ಬೆಲ್ಜಿಯಂನಲ್ಲಿ ಕಾರ್ಮಿಕರು ಒಳಚರಂಡಿ ಕಾಮಗಾರಿ ಕೆಲಸ ಮಾಡುತ್ತಿದ್ದಾಗ, ಮಣ್ಣಿನಡಿ ಬೃಹತ್ ಪ್ರಮಾಣದ ಚಿನ್ನದ ಗಟ್ಟಿಗಳು ಮತ್ತು ಅಪರೂಪದ ನಾಣ್ಯಗಳನ್ನು ಪತ್ತೆಯಾಗಿವೆ. ಸುಮಾರು 9 ಮಿಲಿಯನ್ ಯುರೋಗಳಷ್ಟು (ಅಂದಾಜು 98 ಕೋಟಿ ರೂ.) ಸಿಕ್ಕಿದೆ. ಇದನ್ನೂ ಓದಿ: ಫುಡ್ ಟ್ರಕ್‌ನಲ್ಲಿ ಅಡಗುವ ಮುನ್ನ ನಿಮ್ಮ ಭದ್ರತೆ ನೋಡಿಕೊಳ್ಳಿ: ಟ್ರಂಪ್‌ಗೆ ಇರಾನ್ ತಿರುಗೇಟು
ಚಿನ್ನದ ನಾಣ್ಯಗಳು, ಗಟ್ಟಿಗಳು ಮತ್ತು ಬೆಳ್ಳಿಯ ಬಾರ್‌ಗಳನ್ನು ಒಳಗೊಂಡಿದ್ದ ನಿಧಿ, 19 ನೇ ಶತಮಾನದ ಉತ್ತರಾರ್ಧದಲ್ಲಿ ಬ್ರೂವರಿ ಮಾಲೀಕ ಥಿಯೋಫಿಲಸ್ ವ್ಯಾನ್ ಆಶೆಗಾಗಿ ನಿರ್ಮಿಸಲಾದ ಭವ್ಯವಾದ ವಿಲ್ಲಾದ ಕೆಳಗೆ ಇಟ್ಟಿಗೆಗಳಿಂದ ಕೂಡಿದ ನೆಲಮಾಳಿಗೆಯಲ್ಲಿ ಮುಚ್ಚಿದ ಚೀಲದೊಳಗೆ ಮರೆಮಾಡಲಾಗಿತ್ತು.
ಅಧಿಕಾರಿಗಳು ತ್ವರಿತವಾಗಿ ಸ್ಥಳವನ್ನು ವಶಪಡಿಸಿಕೊಂಡು, ನಿಧಿಯನ್ನು ಬ್ರಸೆಲ್ಸ್‌ನಲ್ಲಿರುವ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದರು. ಕಾನೂನುಬದ್ಧ ಮಾಲೀಕತ್ವವನ್ನು ನಿರ್ಧರಿಸಲು ಅಧಿಕಾರಿಗಳು ಈಗ ಅದರ ಮೂಲವನ್ನು ಪರಿಶೀಲಿಸುತ್ತಿದ್ದಾರೆ.
ಈಸ್ಟ್ ಫ್ಲಾಂಡರ್ಸ್ ಪ್ರಾಸಿಕ್ಯೂಟರ್ ಕಚೇರಿಯ ಹ್ಯಾನ್ ಒಲ್ಲೆವಿಯರ್ ಪ್ರತಿಕ್ರಿಯಿಸಿ, ಈ ಪ್ರಕರಣವು ಸಂಕೀರ್ಣವಾದ ನಾಗರಿಕ ವಿವಾದವನ್ನು ಹುಟ್ಟುಹಾಕಬಹುದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ; ಮೃತರ ಸಂಖ್ಯೆ 40ಕ್ಕೆ ಏರಿಕೆ
ಪ್ರಸ್ತುತ ಕಟ್ಟಡ ಗುತ್ತಿಗೆದಾರರು, ಕಲ್ಯಾಣ ಸಂಸ್ಥೆ ಮತ್ತು ವ್ಯಾನ್ ಆಸ್ಚೆ ಕುಟುಂಬದ ವಂಶಸ್ಥರು ಈ ನಿಧಿಯ ವಾರಸುದಾರರ ಪಟ್ಟಿಗೆ ಸೇರಿದ್ದಾರೆ.
