ಬೆಂಗಳೂರು: ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಆಹಾರ ಇಲಾಖೆ (Food Department) ಅಲರ್ಟ್ ಆಗಿದ್ದು, ರಾಜ್ಯದಲ್ಲಿ 10 ಕೆಜಿ ಅಕ್ಕಿ (Annabhagya) ವಿತರಣೆಗೆ ಸರ್ಕಾರ ಆದೇಶಿಸಿದೆ.
ಅನ್ನಭಾಗ್ಯ ಅಕ್ಕಿ ವಿತರಣೆ ವ್ಯತ್ಯಯದ ಬಗ್ಗೆ ಪಬ್ಲಿಕ್ ಟಿವಿ (PUBLiC TV) ನಿರಂತರ ವರದಿ ಪ್ರಸಾರ ಮಾಡಿದ್ದು, ಆಹಾರ ಇಲಾಖೆ ಎಚ್ಚೆತ್ತುಕೊಂಡಿದೆ. ಮೊದಲು 6 ಕೆಜಿ ರಾಗಿ, 4 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಕೇಂದ್ರ ಸರ್ಕಾರದ ಯೋಜನೆಯಿಂದ ಮಾತ್ರ ಅಕ್ಕಿ ವಿತರಣೆ ಆಗುತ್ತಿತ್ತು. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಸ್ಥಗಿತವಾಗಿತ್ತು. ಇದನ್ನೂ ಓದಿ: ಇಂದು ರಾತ್ರಿ ಅಮೆರಿಕದಿಂದ ಭೀಕರ ದಾಳಿ – ಇರಾನಿನ ಖಾರ್ಗ್ ದ್ವೀಪ ವಶ ಪಡೆಯುತ್ತೇವೆ: ಟ್ರಂಪ್ ಗುಡುಗು
ಕಳೆದ ಎರಡು ತಿಂಗಳಿನಿಂದ ರಾಗಿ ವಿತರಿಸುತ್ತೇವೆ ಎಂದು ಆದೇಶ ಹೊರಡಿಸಲಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತ ಆಹಾರ ಇಲಾಖೆ ರಾಗಿ ವಿತರಣೆಗೆ ಬ್ರೇಕ್ ಹಾಕಿದೆ. ತನ್ನ ಆದೇಶವನ್ನು ಬದಲಿಸಿಕೊಂಡಿದ್ದು, ಇದೇ ಜೂನ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಅಮೆರಿಕ ಸಮರ್ಥನೆ – `ಜಲವೀರ್’ ಮೇಲಿನ ದಾಳಿ ವೀಡಿಯೋ ರಿಲೀಸ್
