– 2 ಹೆಲ್ ಫೈರ್ ಕ್ಷಿಪಣಿಗಳ ದಾಳಿಯ ತೀವ್ರತೆ ಹೇಗಿತ್ತು?
– ʻಜಲವೀರ್ʼ ಮೇಲೆ ದಾಳಿ ನಡೆಸಿದ್ದು ಏಕೆ? ಹೇಗೆ?
ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷದಲ್ಲಿ ನಿರತವಾಗಿರುವ ಅಮೆರಿಕ ಮತ್ತು ಇರಾನ್ (US vs Iran), ಹಾರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಲು ಕಂಡು ಕೇಳರಿಯದ ಯುದ್ಧ ತಂತ್ರದ ಮೊರೆ ಹೋಗುತ್ತಿವೆ. ಒಮನ್ ಕರಾವಳಿ ಬಳಿ ಕ್ಷಿಪಣಿ ದಾಳಿ ನಡೆಸುತ್ತಿರುವ ಎರಡೂ ದೇಶಗಳು, ನಾವಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿವೆ. ಭಾರತೀಯ ನಾವಿಕರಿದ್ದ (Indian Crew) ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
— U.S. Central Command (@CENTCOM) June 11, 2026
ಒಮನ್ ಕರಾವಳಿಯಲ್ಲಿ ಭಾರತೀಯರಿದ್ದ 3ನೇ ಹಡಗಿನ ಮೇಲೆ ದಾಳಿ ನಡೆಸಿರುವುದಾಗಿ ಖುದ್ದು ಅಮೆರಿಕ ಸೆಂಟ್ರಲ್ ಕಮಾಂಡ್ (CENTCOM) ಒಪ್ಪಿಕೊಂಡಿದೆ. ಹಡಗು ಎಂಜಿನ್ ರೂಮ್‌ಗೆ 2 ಹೆಲ್‌ಫೈರ್ ಕ್ಷಿಪಣಿಗಳನ್ನ ಹಾರಿಸುವ ಮೂಲಕ ದಾಳಿ ನಡೆಸಿರುವುದಾಗಿ ತಿಳಿಸಿದೆ. ಈ ವಾರ ಒಮನ್ ಬಳಿ ದಾಳಿಗೊಳಗಾದ ಭಾರತೀಯ ಸಿಬ್ಬಂದಿ ಹೊಂದಿದ್ದ 3ನೇ ಹಡಗು ಇದಾಗಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮೆರಿಕ ಸೆಂಟ್ರಲ್ ಕಮಾಂಡ್, ಭಾರತೀಯರಿದ್ದ ಹಡಗಿನ ಮೇಲೆ ದಾಳಿ ನಡೆಸಿದ ವಿಡಿಯೋವನ್ನ ಹಂಚಿಕೊಂಡಿದೆ. ಇದನ್ನೂ ಓದಿ: ಹಾರ್ಮುಜ್ ಬಳಿ ಹಡಗಿನ ಮೇಲೆ ಯುಎಸ್ ದಾಳಿ; ಮೂವರು ಭಾರತೀಯರು ಸಾವು

ʻಅಮೆರಿಕ ಸೇನೆಯ ಸೂಚನೆಗಳನ್ನು ಪಾಲಿಸದೇ ಒಮನ್ (Oman) ಕೊಲ್ಲಿಯ ಮೂಲಕ ಇರಾನಿಯನ್ ತೈಲ ಸಾಗಾಟ ಮಾಡಲು ಪ್ರಯತ್ನಿಸಲಾಗುತ್ತಿತ್ತು. ಹೀಗಾಗಿ ಗಿನಿಯಾ-ಬಿಸ್ಸೌ ಎಂ/ಟಿ ಜಲವೀರ್ ವಿರುದ್ಧ ಯುಎಸ್ ಸೆಂಟ್ರಲ್ ಕಮಾಂಡ್ ಕ್ರಮ ಕೈಗೊಂಡಿದೆ. ಹಡಗಿನಲ್ಲಿದ್ದ ಸಿಬ್ಬಂದಿ ಪದೇ ಪದೇ ಅಮೆರಿಕ ಸೇನೆಯ ನಿರ್ದೇಶನಗಳನ್ನ ಕಡೆಗಣಿಸಿದ್ದರಿಂದ ದಾಳಿ ನಡೆಸಲಾಗಿದೆ. ಹಡಗಿನ ಎಂಜಿನ್ ಕೊಣೆಯನ್ನು ಗುರಿಯಾಗಿಸಿ 2 ಹೆಲ್‌ಫೈಯ ಕ್ಷಿಪಣಿಗಳನ್ನು ಹಾರಿಸುವ ಮೂಲಕ ದಾಳಿ ನಡೆಸಲಾಗಿದೆ ಎಂದು CENTCOM ಹೇಳಿಕೊಂಡಿದೆ.
ಹಡಗಿನಲ್ಲಿದ್ದ 24 ಭಾರತೀಯ ಸಿಬ್ಬಂದಿಗಳಲ್ಲಿ 21 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಉಳಿದ ಮೂವರು ನಾವಿಕರು ಮೃತಪಟ್ಟಿರುವುದನ್ನ ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಆರಂಭವಾದಾಗಿನಿಂದ, ಹಾರ್ಮುಜ್ ಜಲಸಂಧಿ ಬಳಿ ವಾಣಿಜ್ಯ ಹಡಗಿನಲ್ಲಿರುವ ಭಾರತೀಯ ಸಿಬ್ಬಂದಿಗಳು ಮೃತಪಟ್ಟಿರುವುದು ಇದೇ ಮೊದಲು. ಇದನ್ನೂ ಓದಿ: 3 ದಿನಗಳಲ್ಲಿ ಮೂರು ಭಾರತೀಯ ಹಡಗುಗಳ ಮೇಲೆ ಅಮೆರಿಕ ದಾಳಿ
ಭಾರತ ತೀವ್ರ ಖಂಡನೆ
ಭಾರತೀಯ ನಾವಿಕರಿದ್ದ ಟ್ಯಾಂಕರ್‌ಗಳ ಮೇಲಿನ ಅಮೆರಿಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇಂತಹ ದಾಳಿಗಳನ್ನ ಅಮೆರಿಕ ತಕ್ಷಣವೇ ಕೊನೆಗೊಳಿಸಬೇಕು ಎಂದು ವಿದೇಶಾಂಗ ಸಚಿವಾಲಯ ಒತ್ತಾಯಿಸಿದೆ.

ʻಕಳೆದ ಕೆಲ ದಿನಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ಭಾರತೀಯ ನಾವಿಕರು ಒಳಗೊಂಡ ಹಲವಾರು ಘಟನೆಗಳು ನಡೆದಿವೆ. ಆದ್ರೆ ನಮ್ಮ ನಾವಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಇದನ್ನ ಮತ್ತೆ ಮತ್ತೆ ಒತ್ತಿ ಹೇಳಬೇಕಾಗಿಲ್ಲ. ಓಮನ್ ಕರಾವಳಿಯಲ್ಲಿ ಭಾರತೀಯರಿದ್ದ ಹಡಗಿನ ಮೇಲಿನ ದಾಳಿಯನ್ನು ನಾವು ಖಂಡಿಸಿದ್ದೇವೆ. ದುರದೃಷ್ಟವಶಾತ್ ಈ ದಾಳಿಯಲ್ಲಿ ನಮ್ಮ ಮೂವರು ಭಾರತೀಯ ಪ್ರಜೆಗಳನ್ನ ಕಳೆದುಕೊಂಡಿದ್ದೇವೆ. ಬಲವಾದ ಪ್ರತಿಭಟನೆ ದಾಖಲಿಸಲು ನಾವು ಯುಎಸ್ ಸಿಡಿಎಯನ್ನ ಇಲ್ಲಿಗೆ ಕರೆಸಿದ್ದೇವೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿದ್ದು, ಎರಡೂ ದೇಶಗಳು ಪರಸ್ಪರರ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿವೆ. ಕುವೈತ್, ಬಹ್ರೇನ್ ಮತ್ತು ಜೋರ್ಡಾನ್‌ಗಳಲ್ಲಿರುವ ಅಮೆರಿಕದ 21 ಸೇನಾ ನೆಲಗಳ ಮೇಲೆ ಇರಾನ್ ದಾಳಿ ಮಾಡಿದೆ. ಅಮೆರಿಕ ಕೂಡ ಭಾರೀ ಮಟ್ಟದ ಪ್ರತೀಕಾರದ ದಾಳಿಗಳನ್ನು ಮಾಡುತ್ತಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯ ಯುದ್ಧ ಮತ್ತೆ ಉಲ್ಬಣ – ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್
