ಟೆಹ್ರಾನ್: ಒಮಾನ್ ಕರಾವಳಿ ಬಳಿ ಭಾರತೀಯ ಹಡಗುಗಳ (Indian Ships) ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಒಮಾನ್‌ನಲ್ಲಿ (Oman) 3 ದಿನಗಳಲ್ಲಿ ಮೂರು ಹಡಗುಗಳ ಮೇಲೆ ಅಟ್ಯಾಕ್ ಮಾಡಲಾಗಿದ್ದು, ಇನ್ನೆರಡು ಹಡಗುಗಳು ಸಹ ಅಮೆರಿಕದಿಂದ (US) ದಾಳಿಗೊಳಗಾಗಿವೆ.
ಭಾರತೀಯ ಸಿಬ್ಬಂದಿ ಇದ್ದ ವ್ಯಾಪಾರಿ ಹಡಗು ಮೇಲೆ ಅಮೆರಿಕ ದಾಳಿ ನಡೆಸುತ್ತಿರುವುದು ಇದು ಮೂರನೇ ವರದಿಯಾಗಿದೆ. ಎಲ್ಲಾ ಸಿಬ್ಬಂದಿ ಇಲ್ಲಿಯವರೆಗೆ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಲಾಗಿದೆ. ಗಿನಿಯಾ-ಬಿಸ್ಸೌ ಧ್ವಜ ಹೊಂದಿರುವ ಟ್ಯಾಂಕರ್ ‘ಜಲ್ವೀರ್’ ಹಡಗನ್ನು ಗುರುತಿಸಲಾಗಿದೆ. ಇದನ್ನೂ ಓದಿ: ಹಾರ್ಮುಜ್ ಬಳಿ ಹಡಗಿನ ಮೇಲೆ ಯುಎಸ್ ದಾಳಿ; ಮೂವರು ಭಾರತೀಯರು ಸಾವು
ಜೂನ್ 8 ರಂದು ಮೊದಲ ಬಾರಿಗೆ ಎಂಟಿ ಮಾರಿವೆಕ್ಸ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಎರಡನೇ ಘಟನೆಯಲ್ಲಿ, ಜೂನ್ 10 ರಂದು ಒಮಾನ್ ಕೊಲ್ಲಿಯಲ್ಲಿ ಎಂಟಿ ಸೆಟ್ಬೆಲ್ಲೊ ಟ್ಯಾಂಕರ್ ಮೇಲೆ ದಾಳಿ ನಡೆಸಲಾಯಿತು. ಹಡಗಿನಲ್ಲಿ 24 ಭಾರತೀಯ ಸಿಬ್ಬಂದಿ ಇದ್ದರು. 21 ಜನರನ್ನು ರಕ್ಷಿಸಲಾಗಿದೆ. ಕಾಣೆಯಾಗಿದ್ದ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಇರಾನ್ ತೈಲ ವ್ಯಾಪಾರದಲ್ಲಿ ಭಾಗಿಯಾಗಿದೆ ಎಂದು ಶಂಕಿಸಲಾದ ಖಾಲಿ ಟ್ಯಾಂಕರ್ ಮಾರಿವೆಕ್ಸ್ ಮೇಲೆ ಅಮೆರಿಕ ಪಡೆಗಳು ಗುಂಡು ಹಾರಿಸಿದವು. ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಯಿತು. ಇದನ್ನೂ ಓದಿ: 24 ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಅಮೆರಿಕ ದಾಳಿ – ಭಾರತ ತೀವ್ರ ಖಂಡನೆ
ಅಮೆರಿಕದ ದಾಳಿಗೆ ಭಾರತ ಖಂಡನೆ ವ್ಯಕ್ತಪಡಿಸಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ (MEA) ಹೆಚ್ಚುವರಿ ಕಾರ್ಯದರ್ಶಿ (ಅಮೆರಿಕ) ನಾಗರಾಜ್ ನಾಯ್ಡು, ಅಮೆರಿಕದ ಪ್ರಭಾರ ಅಧಿಕಾರಿ ಜೇಸನ್ ಮೀಕ್ಸ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
