ಲಕ್ನೋ: ಉತ್ತರ ಪ್ರದೇಶದ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜವಾದಿ ಪಾರ್ಟಿ(SP) ಅಧ್ಯಕ್ಷ ಅಖಿಲೇಶ್ ಯಾದವ್(Akhilesh Yadav) ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ಇಚ್ಛೆ ವ್ಯಕ್ತಪಡಿಸಿದ್ದಾರೆ
ಸಮಾಜವಾದಿ ಪಾರ್ಟಿ ಈ ಆಫರ್‌ಗೆ ತಣ್ಣನೆಯ ಪ್ರತಿಕ್ರಿಯೆ ನೀಡಿದ್ದು, ಓವೈಸಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಬಹಳ ಕಷ್ಟ ಎಂದು ಹೇಳಿದೆ.
ಮೊರಾದಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಓವೈಸಿ, ಉತ್ತರ ಪ್ರದೇಶದಲ್ಲಿ(Uttar Pradesh Election) ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಮಗೆ ಇಷ್ಟವಿಲ್ಲ. ನಾನು ಸಮಾಜವಾದಿ ಪಾರ್ಟಿ ಜೊತೆ ಕೈಜೋಡಿಸಲು ಮತ್ತು ಮೈತ್ರಿ ಮಾಡಿಕೊಳ್ಳಲು ಸಿದ್ಧನಿದ್ದೇನೆ. ಚುನಾವಣೆ ಮುಗಿದ ಮೇಲೆ ಅಳುವುದಕ್ಕಿಂತ, ಈಗಲೇ ಮಾತುಕತೆ ನಡೆಸುವುದು ಒಳಿತು ಎಂದು ಅಖಿಲೇಶ್ ಯಾದವ್ ಅವರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ಅತ್ಯಂತ ವಿಶ್ವಾಸಾರ್ಹ ಜಾಗತಿಕ ರಕ್ಷಣಾ ಪಾಲುದಾರನಾಗಿ ಹೊರಹೊಮ್ಮುತ್ತಿದೆ – ಮೋದಿ ʻಮನದ ಮಾತುʼ
“Ready to form an alliance; don’t cry later after elections are over.
We’re not against any religion, we’re fighting for our rights.
We want power sharing.
If Akhilesh is sitting, then Owaisi will sit next to him.
You claim to suffer loss if I contest separately so let’s… pic.twitter.com/BJI0x5CB4h
— News Arena India (@NewsArenaIndia) July 26, 2026
ವಿರೋಧ ಪಕ್ಷಗಳ ಮತಗಳನ್ನು ಒಡೆಯುತ್ತಾರೆಂಬ ಆರೋಪಕ್ಕೆ ಉತ್ತರಿಸಿದ ಓವೈಸಿ, ತಾವು ಯಾವುದೇ ಧರ್ಮದ ವಿರುದ್ಧವಾಗಿ ರಾಜಕೀಯ ಮಾಡುತ್ತಿಲ್ಲ. ನ್ಯಾಯ, ಸಮಾನತೆ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದು, ಎಸ್‌ಪಿ ಜೊತೆ ಸೇರಿ ಸ್ಪರ್ಧಿಸಲು ಸಿದ್ಧರಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಆಂಬುಲೆನ್ಸ್‌ನಲ್ಲೇ ಡ್ರಗ್ಸ್ ದಂಧೆ – ಕಳಚಿದ ಜಲೀಲ್ ಬಾಬಾನ ಸಮಾಜಸೇವೆ ಮುಖವಾಡ
ಅಂತಿಮ ನಿರ್ಧಾರವನ್ನು ಅಖಿಲೇಶ್ ಯಾದವ್ ತೆಗೆದುಕೊಳ್ಳಲಿದ್ದಾರೆ ಎಂದ ನದ್ವಿ, ಓವೈಸಿ ಅವರು ಉತ್ತರ ಪ್ರದೇಶಕ್ಕಿಂತ ತಮ್ಮ ರಾಜಕೀಯ ಭದ್ರಕೋಟೆಯಾಗಿರುವ ತೆಲಂಗಾಣ ಮತ್ತು ದಕ್ಷಿಣ ರಾಜ್ಯಗಳತ್ತ ಗಮನಹರಿಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
