ಬೆಂಗಳೂರು ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ಕಾಲಭೈರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಯುವ ಪ್ರತಿಭೆಗಳು ಆರಂಭಿಸಿರುವಂತಹ ಸಂಪಿಗೆ( Sampige) ಸಿನಿಮಾ. ಈ ಚಿತ್ರದ ಮಹೂರ್ತ ಸಮಾರಂಭಕ್ಕೆ ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್(Saniya Iyer) ಹಾಗೂ ಅವರ ತಾಯಿ ದೀಪಾ ಅಯ್ಯರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಗ್ ಬಾಸ್ ಪ್ರತಿಭೆ ಇಶಾನಿ ಹಾಗೂ ಸಾಮಾಜಿಕ ಕಾರ್ಯಕರ್ತ ಆಂಜನಪ್ಪ ಸೇರಿದಂತೆ ಹಲವು ಗಣ್ಯರು , ಸ್ನೇಹಿತರು ದರ್ಶನ್ ಫ್ಯಾನ್ಸ್ ಕಾರ್ಯಕ್ರಮದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು. ಚಿತ್ರೋದ್ಯಮದಲ್ಲಿ ಬಹಳಷ್ಟು ವರ್ಷಗಳ ಅನುಭವವನ್ನು ಪಡೆದುಕೊಂಡಂತಹ ಗೆಳೆಯರ ಬಳಗ ಸೇರಿಕೊಂಡು ಆರಂಭಿಸುತ್ತಿರುವಂತಹ ಈ ನೂತನ ಚಿತ್ರದ ಮಾಹಿತಿಯನ್ನು ನೀಡಲು ಚಿತ್ರತಂಡ ಹಾಜರಿತ್ತು.
ಮೊದಲಿಗೆ ಚಿತ್ರದ ನಿರ್ದೇಶಕ ಗಿರಿ ಗೌಡ ಮಾತನಾಡುತ್ತಾ ಇದು ನನ್ನ ಮೊದಲ ಚಿತ್ರ. ಈ ಹಿಂದೆ ನಾನು ಹಲವಾರು ವಿಡಿಯೋ ಆಲ್ಬಮ್ ಸಾಂಗ್ ಗಳನ್ನು ನಿರ್ದೇಶನ ಮಾಡಿದ್ದೆ. ಮದ್ದೂರು ವಡೆ ಹಾಗೂ ಮಹಾ ಕಾಳಿ ಎಂಬ ಚಿತ್ರವನ್ನ ಕೂಡ ಆರಂಭಿಸಿದೆ. ಈ ನನ್ನ ಸಂಪಿಗೆ ಚಿತ್ರ ಒಂದು ಮರ್ಡರ್ ಮಿಸ್ಟ್ರಿ ಕಥಾನಕವನ್ನು ಒಳಗೊಂಡಿದ್ದು, ಹೆಣ್ಣಿನ ಮೇಲಿನ ಅತ್ಯಾಚಾರ ದೌರ್ಜನ್ಯದ ಸುತ್ತ ಕಥೆ ಬೆಸೆದುಕೊಂಡಿದ್ದು, ಒಂದು ಉತ್ತಮ ಸಂದೇಶವಿದೆ. ಈ ಚಿತ್ರವು ಆಗಸ್ಟ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಮೇಲುಕೋಟೆ, ಕಣ್ಣೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಇಪ್ಪತ್ತು ದಿನಗಳಲ್ಲಿ ಚಿತ್ರೀಕರಣ ಮಾಡಲು ಸಿದ್ಧರಾಗಿದ್ದೇವೆ. ಇದನ್ನೂ ಓದಿ:‘ರಾಮಾಯಣ’ ಟ್ರೈಲರ್ ರಿಲೀಸ್ ಬೆನ್ನಲ್ಲೇ ಹತ್ತು ತಲೆ ರಾವಣನ ಮುಂದೆ ರಾಧಿಕಾ ಪಂಡಿತ್ ಪೋಸ್!

ಇಡೀ ಚಿತ್ರದಲ್ಲಿ ಒಂದು ಹಾಡು ಇದ್ದು, ಯುವ ಪ್ರತಿಭೆಗಳು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಮುಂದಿನ ದಿನಗಳಲ್ಲಿ ನಾಯಕಿ ಯಾರೆಂದು ಪರಿಚಯ ಮಾಡುತ್ತೇವೆ ಎಂದರು. ಚಿತ್ರದ ನಿರ್ಮಾಪಕ ರುದ್ರ ಕುಮಾರ್ ಮಾತನಾಡತ್ತ ನನ್ನದು ಬ್ರೆಡ್ ಫ್ಯಾಕ್ಟರಿ ಬ್ಯುಸಿನೆಸ್ ಇದೆ. ನನ್ನ 10 ವರ್ಷದ ಕನಸು ಈ ಚಿತ್ರ ಮಾಡುತ್ತಿದ್ದೇನೆ. ಉತ್ತಮ ಕಥೆ ಸಿಕ್ಕಿದೆ. ಕಾಲಭೈರವೇಶ್ವರ ಪ್ರೊಡಕ್ಷನ್ ಮೂಲಕ ಈ ಚಿತ್ರ ಆರಂಭಿಸಿದ್ದು , ನಿರ್ದೇಶಕ ನನ್ನ ಸಹೋದರ ಇದ್ದ ಹಾಗೆ , ಅವನಿಗಾಗಿ ಈ ಚಿತ್ರ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ , ಸಹಕಾರ ಇರಲಿ ಎಂದು ಹೇಳಿದರು. ಇದನ್ನೂ ಓದಿ: ಕೊನೆಗೂ ಪ್ರೀತಿಯ ವಿಚಾರ ಬಿಚ್ಚಿಟ್ಟ ʼಕಮಲಿʼ ಖ್ಯಾತಿಯ ಅಮೂಲ್ಯ; ಬಾಯ್‌ಫ್ರೆಂಡ್ ಯಾರು ಗೊತ್ತಾ?
