ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಗಾಸಿಪ್‌ಗೆ ಕೊನೆಗೂ ಸೀರಿಯಲ್ ನಟಿ ಅಮೂಲ್ಯ (Amulya Omkar Gowda) ಓಂಕಾರ್ ಗೌಡ ತೆರೆ ಎಳೆದಿದ್ದಾರೆ. ಇಷ್ಟು ದಿನ ಅಮೂಲ್ಯ ಜೊತೆ ಆನ್‌ಸ್ಕ್ರೀನ್ ಪೇರ್ ಆಗಿ ಮಿಂಚಿದ್ದ ನಟನನ್ನೇ ರೀಯಲ್ ಲೈಫ್ ಬಾಯ್‌ಫ್ರೆಂಡ್ ಎಂದು ರಿವೀಲ್ ಮಾಡಿದ್ದಾರೆ.
‘ಕಮಲಿ’ (Kamali) ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಅಮೂಲ್ಯ, ಅದೇ ಸೀರಿಯಲ್‌ನ ನಾಯಕನಟ ನಿರಂಜನ್ ಬಿಎಸ್ (Niranjan BS) ಅವರೇ ತಮ್ಮ ಪ್ರಿಯಕರ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಅಮೂಲ್ಯ ಮತ್ತು ನಿರಂಜನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅಮೂಲ್ಯ, ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ವಿಡಿಯೋದಲ್ಲಿ ನಿರಂಜನ್ ಜೊತೆ ಕಾಣಿಸಿಕೊಂಡ ಅಮೂಲ್ಯ, ʼಈ ವಿಚಾರವನ್ನು ನಾವು ಮರೆಮಾಚಲು ಪ್ರಯತ್ನ ಮಾಡಿರಲಿಲ್ಲ. ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆವು. ಒಂದು ಫೋಟೋ ಅಥವಾ ಪೋಸ್ಟ್ ಹಾಕುವುದಕ್ಕಿಂತ ನಿಮ್ಮ ಮುಂದೆ ಕೂತು ಈ ವಿಚಾರ ಹೇಳಬೇಕು ಅನ್ನಿಸಿತು. ಅದಕ್ಕಾಗಿ ಈಗ ನಮ್ಮ ಪ್ರೀತಿಯ ವಿಚಾರವನ್ನು ಅಧಿಕೃತವಾಗಿ ಹೇಳುತ್ತಿದ್ದೇವೆʼ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕಿಚ್ಚು ಹೊತ್ತಿಸಿದ `ತಬಾಹಿ’ ಚೆಲುವೆಯ ರೆಡ್ ಹಾಟ್ ಲುಕ್
‘ಕಮಲಿ’ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸುತ್ತಿದ್ದ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ನಂತರ ಅದು ಪ್ರೀತಿಯಾಗಿ ಬದಲಾಗಿದೆ. ಧಾರಾವಾಹಿ ಮುಗಿದ ಬಳಿಕವೂ ಇಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗಲೇ ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಈಗ ಅಮೂಲ್ಯ ಮತ್ತು ನಿರಂಜನ್ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ ಬಳಿಕ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಈ ಜೋಡಿ ಯಾವಾಗ ಮದುವೆಯಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.ಇದನ್ನೂ ಓದಿ: ಕಾವೇರಿ ನೀರು ಹೋರಾಟದ ಕನ್ನಡಿಗರ ಕಿಚ್ಚಿಗೆ ಫಿಲ್ಮ್ ಚೇಂಬರ್ ಬೆಂಬಲ
