`ಟಾಕ್ಸಿಕ್’ (Toxic) ಚಿತ್ರದ ತಬಾಹಿ (Tabahi) ಹಾಡಲ್ಲಿ ಗ್ಲ್ಯಾಮರ್ ರಸಗವಳ ಕೊಟ್ಟಿದ್ದಾರೆ ನಟಿ ಕಿಯಾರಾ ಅಡ್ವಾನಿ. ಇದೀಗ `ಟಾಕ್ಸಿಕ್’ ಟೀಮ್‌ನಿಂದ ಆಫಿಷಿಯಲ್ ಆಗಿ ಕಿಯಾರಾ ಅಡ್ವಾನಿಯ (Kiara Advani) ಇನ್ನೊಂದು ಪೋಸ್ಟರ್ ರಿಲೀಸ್ ಆಗಿದ್ದು, ಮಾದಕ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.
`ಟಾಕ್ಸಿಕ್’ ಹಾಡೊಂದರಲ್ಲೇ ಭರಪೂರ್ ಮಾದಕತೆ ದರ್ಶನ ಮಾಡಿಸಿತ್ತು ಯಶ್-ಕಿಯಾರಾ ಜೋಡಿ. ನಾದಿಯಾ ಪಾತ್ರದಲ್ಲಿ ಕಾಣಿಸ್ಕೊಂಡಿರೋ ಕಿಯಾರಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ನಾದಿಯಾ ಪಾತ್ರದ ಇನ್ನೊಂದು ಹೊಚ್ಚ ಹೊಸ ಪೋಸ್ಟರ್‌ನ್ನ ಟಾಕ್ಸಿಕ್ ಟೀಮ್ ರಿಲೀಸ್ ಮಾಡಿದೆ. ಇದನ್ನೂ ಓದಿ:ಯ ಶ್ – ತಾರಾ ಸುತಾರಿಯಾ ‘ಮನಮೋಹಕ’ ಕೆಮಿಸ್ಟ್ರಿ!
Wishing a very Happy Birthday to our Nadia – @advani_kiara ✨️
–Team #Toxic#ToxicTheMovie#ToxicOn26thAug pic.twitter.com/kRYSXk3yFJ
— TOXIC (@Toxic_themovie) July 31, 2026
ಕೆಂಪು ಉಡುಗೆ ಧರಿಸಿ ಮಾದಕ ನೋಟದಲ್ಲಿ ಕಿಯಾರಾ ಕಾಣಿಸ್ಕೊಂಡಿದ್ದಾರೆ. ಈಗಾಗಲೇ ಕಿಯಾರಾ ತಮ್ಮ ಪಾತ್ರದ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು, ಈಗ ರಿಲೀಸ್ ಆದ ಒಂದೇ ಒಂದು ಪೋಸ್ಟರ್‌ನಲ್ಲಿ ಬಹಳವೇ ವಿಶೇಷವಾಗಿ ಕಾಣಿಸ್ಕೊಂಡಿದ್ದಾರೆ.
