ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ರಾಜ್ ಬಿ. ಶೆಟ್ಟಿ (Raj B Shetty) ನಟನೆಯ ‘ಕರಾವಳಿ’ (Karavali) ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕಂಬಳದ ಅದ್ಭುತ ಪ್ರಪಂಚವನ್ನು ಕಣ್ತುಂಬಿಕೊಂಡ ಕನ್ನಡ ಸಿನಿಪ್ರಿಯರು ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ ‘ಕರಾವಳಿ’ ಸಿನಿಮಾ ಗಲ್ಫ್ ಕಂಟ್ರಿಗೂ ಎಂಟ್ರಿ ಕೊಡುತ್ತಿದೆ.
ಶುಕ್ರವಾರದಿಂದ ದುಬೈ ಹಾಗೂ ಅಬುಧಾಬಿಯಲ್ಲೂ ಸಿನಿಮಾ ಅಭಿಮಾನಿಗಳನ್ನು ‘ಕರಾವಳಿ’ ರಂಜಿಸಲಿದೆ. ಈಗಾಗಲೇ ಸರ್ವಂಮಯ, ಜನನಾಯಗನ್, ಬಾಲನ್, ಕರಪ್ಪು, ಪೆದ್ದಿ ಸೇರಿದಂತೆ ಸೌತ್‌ನ ಹಲವು ಹಿಟ್ ಸಿನಿಮಾಗಳನ್ನು ಬಿಡುಗಡೆ ಮಾಡಿರುವ ಖ್ಯಾತ ಫಾರಾಸ್ ಸಿನಿಮಾಸ್, ‘ಕರಾವಳಿ’ ಚಿತ್ರದ ಓವರ್‌ಸೀಸ್ ಹಕ್ಕುಗಳನ್ನು ಖರೀದಿಸಿ ಬಿಡುಗಡೆ ಮಾಡುತ್ತಿರುವುದು ವಿಶೇಷ.
ಜುಲೈ 24ರಂದು ಬಿಡುಗಡೆಯಾದ ‘ಕರಾವಳಿ’ ಸಿನಿಮಾ ಆರಂಭದಲ್ಲಿ 175 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಚಿತ್ರಕ್ಕೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆ ಹಾಗೂ ಹೌಸ್‌ಫುಲ್ ಪ್ರದರ್ಶನದ ಹಿನ್ನೆಲೆ ಇನ್ನಷ್ಟು ಸ್ಕ್ರೀನ್‌ಗಳನ್ನು ಹೆಚ್ಚಿಸಲಾಗಿದೆ.
ಮೊದಲ ದಿನವೇ ‘ಕರಾವಳಿ’ ಸಿನಿಮಾ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಇದುವರೆಗೆ ಚಿತ್ರ 6 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಕನ್ನಡ ಸಿನಿಮಾರಂಗದ ಇಂದಿನ ಪರಿಸ್ಥಿತಿಯಲ್ಲಿ ಇದು ದೊಡ್ಡ ಸಾಧನೆ ಎಂದು ಹೇಳಲಾಗುತ್ತಿದೆ. ಈ ವರ್ಷ ಬಿಡುಗಡೆಯಾದ ಕನ್ನಡ ಸಿನಿಮಾಗಳಲ್ಲಿ ಉತ್ತಮ ಓಪನಿಂಗ್ ಪಡೆದ ಚಿತ್ರಗಳಲ್ಲಿ ‘ಕರಾವಳಿ’ ಕೂಡ ಒಂದಾಗಿದೆ. ಇದನ್ನೂ ಓದಿ: ‘ರಾಮಾಯಣ’ ಟ್ರೈಲರ್ ರಿಲೀಸ್ ಬೆನ್ನಲ್ಲೇ ಹತ್ತು ತಲೆ ರಾವಣನ ಮುಂದೆ ರಾಧಿಕಾ ಪಂಡಿತ್ ಪೋಸ್!
ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತ ಮುನ್ನುಗ್ಗುತ್ತಿದೆ. ಬಿಡುಗಡೆಯಾದ 6ನೇ ದಿನಕ್ಕೆ 5 ಲಕ್ಷಕ್ಕೂ ಹೆಚ್ಚು ಮಂದಿ ಸಿನಿಮಾ ವೀಕ್ಷಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆ ನೋಡಿದ ಬಳಿಕ ಪರಭಾಷೆಗಳಲ್ಲೂ ಚಿತ್ರದ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಮುಂದಿನ ವಾರ ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.ಇದನ್ನೂ ಓದಿ: ಕೊನೆಗೂ ಪ್ರೀತಿಯ ವಿಚಾರ ಬಿಚ್ಚಿಟ್ಟ ʼಕಮಲಿʼ ಖ್ಯಾತಿಯ ಅಮೂಲ್ಯ; ಬಾಯ್‌ಫ್ರೆಂಡ್ ಯಾರು ಗೊತ್ತಾ?
