-ಒಂದೇ ಕುಟುಂಬದ ನಾಲ್ವರ ಸಾವಿಗೆ ಮತಾಂತರ ಯತ್ನವೇ ಕಾರಣ
-ಪೊಲೀಸ್ ತನಿಖೆಯಲ್ಲಿ ಆತ್ಮಹತ್ಯೆಯ ಕಾರಣ ಬಯಲು
ಮಂಗಳೂರು: ಮಂಗಳೂರಿನ ಮೋರ್ಗನ್ಸ್ ಗೇಟ್ ನಲ್ಲಿ ಡಿ.8 ರಂದು ನಡೆದ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೃತ ವಿಜಯಲಕ್ಷ್ಮಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದ ನೂರ್ ಜಹಾನ್ ಎಂಬಾಕೆಯನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
Advertisement
ಮಂಗಳೂರಿನಲ್ಲಿ ಮದುವೆ ಬ್ರೋಕರ್ ಆಗಿದ್ದ ನೂರ್ ಜಹಾನ್ ಎಂಬಾಕೆಯ ಮನೆಯಲ್ಲಿ ಮೃತ ವಿಜಯಲಕ್ಷ್ಮಿ ಕೆಲಸ ಮಾಡುತ್ತಿದ್ದರು. ವಿಜಯಲಕ್ಷ್ಮಿ ಹಾಗೂ ಗಂಡನ ನಡುವೆ ಪದೆ ಪದೇ ಗಲಾಟೆಯಾಗುತ್ತಿತ್ತು ಅದನ್ನೇ ಲಾಭಮಾಡಿಕೊಂಡ ನೂರ್ ಜಹಾನ್ ಪತಿ ನಾಗೇಶ್‍ಗೆ ಡೈವೋರ್ಸ್ ಕೊಡುವಂತೆ ಹೇಳಿದ್ದಳು. ಆ ಬಳಿಕ ಮುಸ್ಲಿಂ ಯುವಕನಿಗೆ ಮದುವೆ ಮಾಡಿಸಿಕೊಡುವುದಾಗಿ ಜೊತೆಗೆ ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗಲು ನೂರ್ ಜಹಾನ್ ಹೇಳಿದ್ದಳು. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
Advertisement
Advertisement
ವಿಜಯಲಕ್ಷ್ಮಿ ಫೋಟೋ ಬಳಸಿ ನೂರ್ ಜಹಾನ್ ಮುಸ್ಲಿಂ ಹುಡುಗನ ಹುಡುಕಾಟ ನಡೆಸಿದ್ದಳು. ಇದೇ ವಿಚಾರದಲ್ಲಿ ನಾಗೇಶ್ ಮತ್ತು ವಿಜಯಲಕ್ಷ್ಮಿ ಮಧ್ಯೆ ಗಲಾಟೆಯಾಗಿ ಹೆಂಡತಿ ಮಕ್ಕಳನ್ನು ಕೊಲೆ ಮಾಡಿ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗೇಶ್ ತನ್ನ ಹೆಂಡತಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಮಗನನ್ನು ಮೂಗು ಹಾಗೂ ಬಾಯಿ ಬಂದ್ ಮಾಡಿ ಸಾಯಿಸಿ, ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿ ರಾತ್ರಿ ಪೂರ್ತಿ ಮೂರು ಹೆಣದೊಂದಿಗೆ ಇದ್ದು, ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ- ಪೊಲೀಸರ ತನಿಖೆಯಿಂದ ಬಯಲು
Advertisement