ತಮಿಳು ಚಿತ್ರರಂಗದ (Kollywood) ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರ ತಾಯಿ ವಯೋಸಹಜ ಖಾಯಿಲೆಯಿಂದ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಅಜಿತ್ ತಾಯಿ ಮೋಹಿನಿ ಮಣಿ (85) (Mohini Mani) ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಚೆನ್ನೈನ (Chennai) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಅಜಿತ್ ಕುಮಾರ್ ಕೆಲಸದ ನಿಮಿತ್ತ ದುಬೈಗೆ ತೆರಳಿದ್ದು, ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚೆನ್ನೈಗೆ ಹೊರಟು ಬಂದಿದ್ದಾರೆ.
ಮೂರು ವರ್ಷಗಳ ಹಿಂದೆ ಅಜಿತ್ ತಂದೆ ಪಿ.ಸುಬ್ರಮಣಿಯಂ ಅವರನ್ನು ಕಳೆದುಕೊಂಡಿದ್ದರು. ಇದೀಗ ತಾಯಿಯನ್ನೂ ಕಳೆದುಕೊಂಡು ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಮೋಹಿನಿ ಅವರ ನಿಧನಕ್ಕೆ ತಮಿಳುನಾಡು ಸಿಎಂ ವಿಜಯ್, ಕಮಲ್ ಹಾಸನ್ ಸೇರಿದಂತೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.
ಮೃತರ ಅಂತ್ಯಕ್ರಿಯೆ ಭಾನುವಾರ ನಡೆಯಲಿದ್ದು, ಕೇವಲ ಆಪ್ತರು, ಹತ್ತಿರದ ಸಂಬಂಧಿಕರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

