ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ(Virat Kohli) ವಿಶಿಷ್ಟ ದಾಖಲೆ (Record) ಬರೆದಿದ್ದಾರೆ. ಸತತ 4 ಐಪಿಎಲ್ ಆವೃತ್ತಿಯಲ್ಲಿ 600 ರನ್‌ಗಳ ಗಡಿ ದಾಟಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.
ಈ ಪಂದ್ಯದಲ್ಲಿ 25 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕೊಹ್ಲಿ ಅಂತಿಮವಾಗಿ ಅಜೇಯ 75 ರನ್(42 ಎಸೆತ, 9 ಬೌಂಡರಿ, 3 ಸಿಕ್ಸ್) ಹೊಡೆದು ಎರಡನೇ ಬಾರಿ ಆರ್‌ಸಿಬಿಗೆ ಕಪ್ ಗೆದ್ದುಕೊಟ್ಟಿದ್ದಾರೆ. ಇದನ್ನೂ ಓದಿ:ಒಂದೇ ವರ್ಷದಲ್ಲಿ ಎರಡು ಬಾರಿ ಆರ್‌ಸಿಬಿ ಚಾಂಪಿಯನ್
𝙁𝙞𝙧𝙨𝙩 𝙩𝙞𝙢𝙚 𝙬𝙖𝙨 𝙨𝙤 𝙣𝙞𝙘𝙚, 𝙩𝙝𝙚𝙮 𝙝𝙖𝙙 𝙩𝙤 𝙙𝙤 𝙞𝙩 𝙩𝙬𝙞𝙘𝙚 ❤️@RCBTweets are your #TATAIPL 2026 Champions 🏆#Final | #TheFinalLeap | #RCBvGT pic.twitter.com/vAqXacHPju
— IndianPremierLeague (@IPL) May 31, 2026
ಯಾವ ವರ್ಷ ಎಷ್ಟು ರನ್?
2023 –> 14 ಇನ್ನಿಂಗ್ಸ್ – 639 ರನ್
2024 –> 15 ಇನ್ನಿಂಗ್ಸ್ – 741 ರನ್(ಆರೆಂಜ್ ಕ್ಯಾಪ್)
2025 –>16 ಇನ್ನಿಂಗ್ಸ್ – 657 ರನ್
2026 –> 16 ಇನ್ನಿಂಗ್ಸ್ – 675 ರನ್
ಈ ಆವೃತ್ತಿಯಲ್ಲಿ ಕೊಹ್ಲಿ 4 ಬಾರಿ ನಾಟೌಟ್ ಆಗಿದ್ದರು. ಒಂದು ಶತಕ (105* ರನ್), 5 ಅರ್ಧಶತಕ ಹೊಡಿದ್ದಾರೆ. ಒಟ್ಟು 73 ಬೌಂಡರಿ, 25 ಸಿಕ್ಸ್, 165.84 ಸ್ಟ್ರೈಕ್ ರೇಟ್‌ನಲ್ಲಿ ಕೊಹ್ಲಿ 675 ರನ್ ಚಚ್ಚಿದ್ದಾರೆ. ಇದನ್ನೂ ಓದಿ: ಅಂದು ಪಾಟಿದರ್ ಔಟ್ – ಇಂದು ಸುಂದರ್ ನಾಟೌಟ್!
Finishing off in style 🥳
And it’s none other than King Kohli 😎👑
Scorecard ▶️ https://t.co/Yz6K3q6w0X#TATAIPL | #Final | #TheFinalLeap | #RCBvGT pic.twitter.com/FZNGQ26gBs
— IndianPremierLeague (@IPL) May 31, 2026
