ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಈಗ ಚರ್ಚೆಗೆ ಗ್ರಾಸವಾಗಿದೆ.
ಇನ್ನಿಂಗ್ಸ್‌ನ 10ನೇ ಓವರಿನ ಕೊನೆಯ ಎಸೆತ ವಾಷಿಂಗ್ಟನ್ ಸುಂದರ್ (Washington Sundar) ಅವರು ಸಿಕ್ಸ್ ಸಿಡಿಸಲು ಹೋಗಿ ಬಾಲ್ ಡೀಪ್ ಫೈನ್ ಕಡೆ ಹೋಯಿತು. ಈ ವೇಳೆ ಅಲ್ಲಿದ್ದ ಜೋರ್ಡಾನ್ ಕಾಕ್ಸ್ ಡೈವ್ ಮಾಡಿ ಬಾಲ್ ಹಿಡಿದು ಔಟ್ ಆಗಿದ್ದಾರೆ ಎಂದು ಸಂಭ್ರಮಿಸಿದರು.

ಔಟಾದ ಕಾರಣ ಸುಂದರ್ ಕ್ರೀಸ್‌ಗೆ ತೆರಳುತ್ತಿದ್ದರು. ಈ ವೇಳೆ ಮೂರನೇ ಅಂಪೈರ್‌ಗೆ ತೀರ್ಪು ವರ್ಗಾವಣೆಯಾದ ಕಾರಣ ಬೌಂಡರಿ ಗೆರೆಯ ಬಳಿ ನಿಂತರು. ಇದನ್ನೂ ಓದಿ: ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದುಪಡಿಸಿ, ಬೌಲರ್‌ಗೆ ಯಾಕೆ 5 ಓವರ್ ಕೊಡಬಾರದು – ಸಚಿನ್ ಪ್ರಶ್ನೆ
ಈ ಪಂದ್ಯದಲ್ಲೇ ನಾಟೌಟ್ ತೀರ್ಪು ಬಂದರೂ ಆರ್‌ಸಿಬಿ ಮತ್ತು ಗುಜರಾತ್ ಮಧ್ಯೆ ಏಪ್ರಿಲ್ 30 ರಂದು ಇದೇ ಮೋದಿ ಮೈದಾನದಲ್ಲಿ ರಜತ್ ಪಾಟಿದರ್ (Rajat Patidar) ಔಟಾದ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ.
Gone… gone… DROPPED! 😱🤯
Big moment in the match as #WashingtonSundar is dropped in the deep by #JordanCox. 👀#TATAIPL 2026 FINAL | #RCBvGT | LIVE NOW 👉 https://t.co/nTKb3Qmpst pic.twitter.com/xUznFU4TBU
— Star Sports (@StarSportsIndia) May 31, 2026
ಅರ್ಶನ್ ಖಾನ್ ಎಸೆದ 8ನೇ ಓವರಿನ 4ನೇ ಎಸೆತ ಪಾಟಿದರ್ ಅವರ ಬ್ಯಾಟಿನ ಎಡ್ಜ್‌ಗೆ ತಾಗಿ ಡೀಪ್ ಸ್ಕ್ಯಾರ್ ಕಡೆ ಹೋಗಿತ್ತು. ಈ ವೇಳೆ ಜೇಸನ್ ಹೋಲ್ಡರ್ ಅವರು ಡೈವ್ ಮಾಡಿ ಹಿಡಿದರು. ಈ ವೇಳೆ ಬಾಲ್ ನೆಲಕ್ಕೆ ತಾಗಿದಂತೆ ಕಂಡಿದ್ದರೂ ಮೂರನೇ ಅಂಪೈರ್ ಔಟ್ ತೀರ್ಪು ನೀಡಿದ್ದರು.
ಈಗ ಅಭಿಮಾನಿಗಲು ಹೋಲ್ಡರ್ ಹಿಡಿದ ಕ್ಯಾಚ್‌ಗೆ ಔಟ್ ನೀಡಿದ್ದರೆ ಕಾಕ್ಸ್ ಹಿಡಿದ ಕ್ಯಾಚ್ ಯಾಕೆ ಔಟ್ ನೀಡಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.
🚨Virat Kohli and Andy flower’s fight with Umpires 🚨
– Rajat Patidar OUT on a controversial low catch by Jason Holder.
– Virat Kohli & Andy Flower LOSING it at the umpire Krunal Pandya ready to explode– Out or Not Out ??
pic.twitter.com/zQCmzdGzoX— Indian Cricket (@IPL2025Auction) April 30, 2026
