ಮುಂಬೈ:ಟಿ20 ಕ್ರಿಕೆಟ್‌ನಲ್ಲಿ(T20 Cricket) ಬ್ಯಾಟರ್‌ಗಳ ಪ್ರಾಬಲ್ಯ ಹೆಚ್ಚಾಗಿದ್ದು, ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಕಳೆದುಹೋಗಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ರದ್ದುಪಡಿಸಬೇಕು ಎಂದು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅಭಿಪ್ರಾಯಪಟ್ಟಿದ್ದಾರೆ.
ಟಿ20 ಪಂದ್ಯವೇ ಕೇವಲ 20 ಓವರ್‌ಗಳದ್ದುಅದರಲ್ಲೂ ಹೆಚ್ಚುವರಿಯಾಗಿ ಒಬ್ಬ ಬ್ಯಾಟರ್‌ರನ್ನು ಆಡಿಸುವುದರಿಂದ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದರಿಂದ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಕಳೆದುಹೋಗಿದೆ ಎಂದು ಸಚಿನ್ ಹೇಳಿದ್ದಾರೆ.
Sachin Tendulkar’s suggestions to restore balance in T20 cricket and IPL (ESPNcricinfo)
1. Scrap the Impact Player rule.
2. Allow one bowler per team to bowl up to five overs instead of the current four-over limit.
3. Introduce dual Powerplays:
a) A four-over batting… pic.twitter.com/bT17lJGXwu— Cricketopia (@CricketopiaCom) May 31, 2026
ಪ್ರಸ್ತುತ ಇರುವ 6 ಓವರ್‌ಗಳ ಪವರ್‌ಪ್ಲೇ ನಿಯಮವನ್ನು ಬದಲಾಯಿಸಬೇಕು ಎಂದು ಸಚಿನ್ ಸಲಹೆ ನೀಡಿದ್ದಾರೆ. ಅವರ ಪ್ರಕಾರ ಮೊದಲ 4 ಓವರ್‌ಗಳು ಈಗಿರುವಂತೆ ಬ್ಯಾಟರ್‌ಗಳಿಗೆ ಅನುಕೂಲಕರವಾಗಿರಲಿ. ಉಳಿದ 2 ಓವರ್‌ಗಳ ಪವರ್‌ಪ್ಲೇಯನ್ನು ಫೀಲ್ಡಿಂಗ್ ತಂಡದ ನಾಯಕ ತನ್ನ ಇಚ್ಛೆಯ ಸಮಯದಲ್ಲಿ ಬಳಸುವ ಅವಕಾಶ ನೀಡಬೇಕು. ಈಗ ಟಿ20 ಕ್ರಿಕೆಟ್‌ನಲ್ಲಿ ಒಬ್ಬ ಬೌಲರ್ ಗರಿಷ್ಠ 4 ಓವರ್ ಮಾತ್ರ ಬೌಲಿಂಗ್ ಮಾಡಬಹುದು. ಆದರೆ ತಂಡದ ಪ್ರಮುಖ ಬೌಲರ್‌ಗೆ 5ನೇ ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಬೇಕು ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
ಒಬ್ಬ ಬ್ಯಾಟರ್ 20 ಓವರ್‌ಗಳವರೆಗೆ ಬ್ಯಾಟಿಂಗ್ ಮಾಡಬಹುದು. ಹಾಗಿದ್ದರೆ ತಂಡದ ಅತ್ಯುತ್ತಮ ಬೌಲರ್‌ಗೆ 5 ಓವರ್ ಬೌಲಿಂಗ್ ಮಾಡಲು ಅವಕಾಶ ಯಾಕೆ ನೀಡಬಾರದು ಎಂದು ಪ್ರಶ್ನಿಸಿದ್ದಾರೆ. ಇತ್ತೀಚಿನ ಐಪಿಎಲ್‌ನಲ್ಲಿ 200ಕ್ಕೂ ಹೆಚ್ಚು ರನ್‌ಗಳ ಸ್ಕೋರ್‌ಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಕಾಪಾಡಲು ಈ ಬದಲಾವಣೆಗಳು ಅಗತ್ಯ ಎಂದು ಸಚಿನ್ ಹೇಳಿದ್ದಾರೆ.
