ಅಹಮದಾಬಾದ್: ಭಾರತದ ಕ್ರಿಕೆಟ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿಶಿಷ್ಟ ದಾಖಲೆ ಬರೆದಿದೆ. ಒಂದೇ ವರ್ಷದಲ್ಲಿ ಮಹಿಳೆಯರ ಟಿ20 ಮತ್ತು ಪುರುಷರ ಟಿ20 ಚಾಂಪಿಯನ್ ಆಗಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ.
ಈಗ ಗುಜರಾತ್ ಟೈಟಾನ್ಸ್(GT) ತಂಡದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ್ದರೆ ಈ ವರ್ಷದ ಫೆಬ್ರವರಿಯಲ್ಲಿ ವಡೋದರದಲ್ಲಿ ನಡೆದ WPL ಮಹಿಳೆಯರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ರೋಚಕ 6 ವಿಕೆಟ್‌ಗಳ ಜಯ ಸಾಧಿಸಿತ್ತು.

ಮೊದಲು ಬ್ಯಾಟ್ ಬೀಸಿದ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಹೊಡೆದಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ಇನ್ನು 2 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 204 ರನ್ ಹೊಡೆದು ಜಯಗಳಿಸಿತು. ಇದನ್ನೂ ಓದಿ: ಟೈಟಾನ್ಸ್ ಮುಳುಗಿಸಿದ ಕೊಹ್ಲಿ| ಈ ಸಲವೂ ಕಪ್ ನಮ್ದೇ, ಸತತ 2ನೇ ಬಾರಿ ಆರ್‌ಸಿಬಿ ಚಾಂಪಿಯನ್!
ಡಬ್ಲ್ಯೂಪಿಎಲ್ ಚಾಂಪಿಯನ್ಸ್
2023 –> ಮುಂಬೈ ಇಂಡಿಯನ್ಸ್
2024 –> ರಾಯಲ್ ಚಾಲೆಂಜರ್ಸ್ ಬೆಂಗಳೂರು
2025 –> ಮುಂಬೈ ಇಂಡಿಯನ್ಸ್
2026 –> ರಾಯಲ್ ಚಾಲೆಂಜರ್ಸ್ ಬೆಂಗಳೂರು
