ಬೆಂಗಳೂರು: ಮಳೆಯಿಂದ ನೆನೆದಿದ್ದ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೊಮ್ಮಶಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ದ್ಯಾಮಪ್ಪ ಹಾಗೂ ಬಾಬುಲಾಲ್ ಮೃತ ಕಾರ್ಮಿಕರು. ಕಳೆದ ಎರಡು ದಿನದ ಮಳೆಯಿಂದ ನಿರ್ಮಾಣ ಹಂತದ ಗೋಡೆ ನೆನೆದಿತ್ತು. ಈ ಗೋಡೆಯನ್ನು ಮತ್ತೆ ನಿರ್ಮಾಣಕ್ಕೆ ಕಾರ್ಮಿಕರು ಮುಂದಾದಾಗ ಕುಸಿದಿದೆ. ಇದರಿಂದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಾಗೇಪಲ್ಲಿ | ಪ್ಯಾಸೆಂಜರ್ ಆಟೋಗೆ ಕಾರು ಡಿಕ್ಕಿ – ಐವರು ದುರ್ಮರಣ
ಪಟೇಲ್ ಎಂಬವವರಿಗೆ ಸೇರಿದ ಸೈಟ್‌ನಲ್ಲಿ ಈ ಅವಘಡ ನಡೆದಿದೆ. ಇಬ್ಬರ ಮೃತದೇಹಗಳನ್ನು ನೆಲಮಂಗಲ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಕ್ರೀದ್ ದಿನ ವಿದ್ಯಾರ್ಥಿಯ ಹತ್ಯೆ – ಸೂರ್ಯನನ್ನು ಕೊಲೆಗೈದ ಅಸಾದ್ ಎನ್‌ಕೌಂಟರ್‌ಗೆ ಬಲಿ
