ಯಶ್ ಹಾಗೂ ಕಿಯಾರಾ ಅಡ್ವಾಣಿ (Kiara Advani) ನಟನೆಯ ಬಹುನಿರೀಕ್ಷಿತ ʼಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ʼ (Toxic) ಸಿನಿಮಾ ಸದ್ಯ ಸಖತ್ ಸದ್ದು ಮಾಡ್ತಿದೆ. ಇದೇ ವೇಳೆ ನಿನ್ನೆಯಷ್ಟೇ ಬಿಡುಗಡೆಯಾದ ಟ್ರೈಲರ್‌ಗೆ ಕಿಯಾರಾ ಅಡ್ವಾಣಿ ನಟನೆಯ ಕುರಿತು ಪತಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಮೊದಲ ಬಾರಿಗೆ ಸ್ವೀಟ್ ರಿಯಾಕ್ಷನ್ ನೀಡಿದ್ದಾರೆ.
ಟ್ರೈಲರ್ ನೋಡಿದ ಬಳಿಕ ಸಿದ್ಧಾರ್ಥ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಿಯಾರಾ ಪಾತ್ರವನ್ನು ಹಾಡಿ ಹೊಗಳಿದ್ದಾರೆ. ಸಿನಿಮಾಗೋಸ್ಕರ ಕಿಯಾರಾ ಹಾಕಿದ ಎಫರ್ಟ್ಸ್, ಡೆಡಿಕೇಶನ್ ಬಗ್ಗೆ ಬರೆದುಕೊಂಡಿದ್ದಾರೆ. ಕಿಯಾರಾಗೆ, ನಿನ್ನ ಈ ಶ್ರಮ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದು ನಿನ್ನ ಪರಿಶ್ರಮಕ್ಕೆ ತಕ್ಕ ಪ್ರರಿಫಲ ಸಿಗಲಿದೆ ಎಂದು ಹೇಳಿದ್ದಾರೆ. ಜೊತೆಗೆ ಯಶ್, ನಿರ್ದೇಶಕಿ ಗೀತು ಮೋಹನ್‌ದಾಸ್ ಸೇರಿದಂತೆ ಇಡೀ ‘ಟಾಕ್ಸಿಕ್’ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ‘ತಬಾಹಿ’ ಹಾಡಿನಲ್ಲಿರುವ ಕಿಯಾರಾ ಮತ್ತು ಯಶ್ ಅವರ ರೋಮ್ಯಾಂಟಿಕ್ ದೃಶ್ಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಈ ಎಲ್ಲ ಪ್ರತಿಕ್ರಿಯಗಳನ್ನು ಸಿದ್ಧಾರ್ಥ್ ಪ್ರೊಫೇಷನಲ್ ಆಗಿ ಹ್ಯಾಂಡಲ್ ಮಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ: ಭಾಗ-2 | ಶಾಂತಿ ಕ್ರಾಂತಿ ರೀರಿಲೀಸ್ – ಸಿನಿಮಾದ ನೆಗೆಟಿವ್ ಕಾಪಿ ಇಲ್ಲ, ದುಬಾರಿ ದುನಿಯಾ
ಇನ್ನು ಬೆಂಗಳೂರಿನಲ್ಲಿ ನಡೆದ ‘ಟಾಕ್ಸಿಕ್’ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲೂ ಯಶ್ ಕಿಯಾರಾ ಅವರನ್ನು ಹಾಡಿ ಹೊಗಳಿದ್ದಾರೆ. ಸಿನಿಮಾದಲ್ಲಿನ ಪಾತ್ರಕ್ಕಾಗಿ ಕಿಯಾರಾ ಅವರ ಸಮರ್ಪಣೆಯನ್ನು ಯಶ್ ಮೆಚ್ಚಿಕೊಂಡಿದ್ದಾರೆ. ನಟಿಯಾಗಿ ಕೆಲಸ ಮಾಡುವಾಗ ಎದುರಾಗುವ ನೆಗೆಟಿವಿಟಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನೀವು ನಂಬಿದ್ದನ್ನು ಮಾಡಿ, ಜನರು ಖಂಡಿತ ಮೆಚ್ಚಿಕೊಳ್ಳುತ್ತಾರೆ ಎಂಬರ್ಥದಲ್ಲಿ ಯಶ್ ಕಿಯಾರಾಗೆ ಧೈರ್ಯ ತುಂಬಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲು ಸಿದ್ಧವಾಗಿದೆ. ಇದನ್ನೂ ಓದಿ: ಶಾಂತಿಕ್ರಾಂತಿ ಮರು ಬಿಡುಗಡೆಗೆ ಹಲವು ವಿಘ್ನ – ಮೇಕಿಂಗ್ ಹಿಂದಿದೆ ಕರಾಳ ಕಥೆ



