-ದೇವರು ಮಗುವನ್ನು ತೆಗೆದುಕೊಂಡು ಹೋದ ಎಂದಿದ್ದ ಹಂತಕರು
ಬೀದರ್: ಆರೈಕೆ ಮಾಡಲಾಗದೇ 50 ದಿನದ ಹಸುಗೂಸನ್ನು ಹೆತ್ತ ತಾಯಿ ಸೇರಿ ನಾಲ್ಕು ಜನ ಕೊಲೆ ಮಾಡಿ ಬಾವಿಗೆ ಬಿಸಾಡಿ ಅಮಾನವೀಯ ಕೃತ್ಯ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ವಡಗಾಂವ್ (ದೇ) ಗ್ರಾಮದಲ್ಲಿ ನಡೆದಿದೆ.
ಪತ್ನಿ ವಾಣಿಶ್ರೀ ಹೆರಿಗೆಗೆ ಎಂದು ತವರು ಮನೆಗೆ ಬಂದಾಗ ಮಾವ ಬಸವರಾಜ್, ಅತ್ತೆ ರತ್ನಮಾ, ಸಹೋದರ ಸಂತೋಷ್ ಸೇರಿ ಕೊಲೆ ಮಾಡಿದ್ದಾರೆ ಎಂದು ಪತಿ ಸಂಜು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಯುಬಿ ಸಿಟಿಯ ಹೋಟೆಲ್‌ಗಳ ಮೇಲೆ ದಾಳಿ – 45 ಕೆಜಿ ಕೊಳೆತ ಮಾಂಸ ಪತ್ತೆ; SKY ಹೋಟೆಲ್ ಕಿಚನ್ ಸೀಜ್
ಎರಡು ವರ್ಷದ ಹಿಂದೆ ಮಹಾರಾಷ್ಟ್ರ ದೇಗೂಲೂರ ತಾಲೂಕಿನ ಕವಳಗಡ್ಡ ಗ್ರಾಮದ ಸಂಜು ಎಂಬುವವರ ಜೊತೆ ವಾಣಿಶ್ರೀ ಮದುವೆಯಾಗಿದ್ದರು. ಮದುವೆಯಾದ ಮೇಲೆ ಇಬ್ಬರು ತೆಲಂಗಾಣದ ನಿಜಮಾಬಾದ್‌ನಲ್ಲಿ ವಾಸಿಸುತ್ತಿದ್ದರು. ಇತ್ತೀಚಿಗೆ ಪತ್ನಿ ಹೆರಿಗೆಗೆ ಎಂದು ತವರು ಮನೆಗೆ ಬಂದಿದ್ದರು. ಮಗುವಿಗೆ ಓಂಕಾರ ಎಂದು ಕರೆಯುತ್ತಿದ್ದು, ರಾತ್ರಿ ವೇಳೆ ಪತ್ನಿ ಶೌಚಕ್ಕೆ ಹೋಗಿ ಬರುವಷ್ಟರಲ್ಲಿ ಮಗುವನ್ನು ದೇವರು ತೆಗೆದುಕೊಂಡು ಹೋಗಿದ್ದಾನೆ ಎಂದು ಪತಿರಾಯನ ಮುಂದೆ ಪತ್ನಿ ಸೇರಿ ನಾಲ್ಕು ಜನ ಕಿರಾತಕರು ಕಥೆ ಕಟ್ಟಿದ್ದರು.
ಹಂತಕರ ಮಾತು ಕೇಳಿ ಅನುಮಾನಗೊಂಡ ಪತಿ ಸಂತಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಎಫ್‌ಐಆರ್ ದಾಖಲಾಗಿದ್ದು, ಆರೈಕೆ ಮಾಡಲಾಗದೇ ಕಿರಾತಕರು 50 ದಿನದ ಹಸುಗೂಸನ್ನು ಕೊಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಮತ್ತೊಂದು ಕಡೆ ನಾಲ್ಕು ಜನರ ಮೂಡನಂಬಿಕೆಗೆ 50 ದಿನದ ಪುಟ್ಟ ಕಂದ ಬಲಿಯಾಯ್ತಾ ಎಂದು ಶಂಕೆ ವ್ಯಕ್ತವಾಗಿದೆ.
ತನಿಖೆ ಮಾಡಿದಾಗ ಪೊಲೀಸರ ಮುಂದೆ ಮಗುವನ್ನು ಕೊಲೆ ಮಾಡಿದ್ದಾಗಿ ನಾಲ್ಕು ಜನ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗೆ E-KYC ಕಡ್ಡಾಯ – ಆಗಸ್ಟ್ 16ಕ್ಕೆ ಡೆಡ್‌ಲೈನ್!



