ತುಮಕೂರು: ಕಳೆದ ಬಾರಿಗಿಂತ ಈ ಬಾರಿ ತುಮಕೂರಿನಲ್ಲಿ ಅದ್ಧೂರಿ ದಸರಾ (Tumakuru Dasara) ಮಾಡಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ದಸರಾ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ದಸರಾ ಉತ್ಸವ ಮಾಡಲು ನಿರ್ಧಾರ ಮಾಡಲಾಗಿದೆ. ತುಮಕೂರು ದಸರಾ ಕಳೆದ ಬಾರಿ ಎರಡು ವರ್ಷವೂ ಯಶಸ್ವಿಯಾಗಿತ್ತು. ಈ ವರ್ಷವೂ ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ವರ್ಷದ ದಸರಾ ಹೇಗೆ ಮಾಡಬೇಕು ಅನ್ನೋದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ ಎಂದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ; ನಾಳೆ ದೆಹಲಿಯಲ್ಲಿ CWRC & CWMA ಸಭೆ

ಮೈಸೂರು ದಸರಾ ಮಾದರಿಯಲ್ಲಿ ಈ ಬಾರಿ ತುಮಕೂರು ದಸರಾ ಆಚರಣೆ ಮಾಡಲಾಗುವುದು. ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ ತುಮಕೂರು ದಸರಾ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ನಾವು ಆಚರಣೆ ಮಾಡುತ್ತಿರೋದು ನಾಡ ಹಬ್ಬ. 9 ದಿನಗಳ ದುರ್ಗೆಯರ ಫೂಜೆ ಮಾಡಿ ಪ್ರತಿನಿತ್ಯ ಹೋಮ ಹವನ, ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತೇವೆ. ತುಮಕೂರು ದಸರಾದಲ್ಲಿ ವಿಶೇಷವಾಗಿ 5,343 ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ಈ ಬಾರಿ ಅದು ಮುಂದುವರಿಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಪತ್ತೆಯಾಗಿದ್ದ ಕುಡುಮಲ್ಲಿಗೆ ಸೊಸೈಟಿ ಸಿಇಒ ಮನೆಗೆ ವಾಪಸ್ – ಪ್ರಕರಣ ಸುಖಾಂತ್ಯ
ಇದೆ ತಿಂಗಳ 15ರಂದು ತುಮಕೂರು ದಸರಾ ಲಾಂಛನ ಬಿಡುಗಡೆ ಮಾಡಿ ಕಾರ್ಯಕ್ರಮದ ಸ್ವರೂಪ ಹೇಳಲಾಗುವುದು. ಅಕ್ಟೋಬರ್ 11ರಂದು ಧ್ವಜಾರೋಹಣ ಮಾಡಿ ತುಮಕೂರು ದಸರಾಗೆ ಚಾಲನೆ ಕೊಡಲಾಗುವುದು. ಅಕ್ಟೋಬರ್ 21ರಂದು ಆನೆ ಮೇಲೆ ಅಂಬಾರಿ ಇರುತ್ತದೆ. ಈ ಬಾರಿ ದೀಪಾಲಾಂಕಾರ ಇನ್ನೂ ವೈಭವೋ ಪ್ರೇರೀತವಾಗಿರುತ್ತದೆ. ಫಲಪುಷ್ಪ ಪ್ರದರ್ಶನ ಕೂಡ ಈ ಬಾರಿ ಇನ್ನೂ ಅದ್ಧೂರಿಯಾಗಿ ಇರಲಿದೆ. ಈ ಬಾರಿ ಹೊಸ ಹೊಸ ಪ್ರದರ್ಶನಗಳು ಇರಲಿದೆ. ನ್ಯೂಯಾರ್ಕ್ ಮಾದರಿಯಲ್ಲಿ ತುಮಕೂರು ಸ್ಕ್ವೇರ್ ಮಾಡಲಿದ್ದೇವೆ. ಎಸ್‌ಎಸ್ ವೃತ್ತದಲ್ಲಿ ಮಾಡಲಿದ್ದೇವೆ. ಇನ್ನು ಅನೇಕ ಹೊಸ ಹೊಸ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲು ಪ್ಲಾನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೊಡಗಿನಲ್ಲಿ ವಿದೇಶಿ ಹಣ್ಣುಗಳ ಕೃಷಿಗೆ ಹೊಸ ಹೆಜ್ಜೆ – ಲಾಂಗಾನ್, ರಾಂಬುಟಾನ್, ಲಿಚ್ಚಿ ಬೆಳೆಯತ್ತ ರೈತರ ಚಿತ್ತ
