ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ದೆಹಲಿಯಲ್ಲಿ CWRC ಮತ್ತು CWMA ಸಭೆ ನಡೆಯಲಿದೆ. CWMA ಕಚೇರಿಯಲ್ಲಿ ಬೆಳಗ್ಗೆ 11:30 CWRC ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾವೇರಿ ನೀರು ಹರಿಸುವ ಬಗ್ಗೆ ಹೊಸ ಆದೇಶ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.
ಮಧ್ಯಾಹ್ನ 2:30 CWMA ಅಧ್ಯಕ್ಷ ಎಸ್.ಕೆ ಹಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕಳೆದ ಸಭೆಯಲ್ಲಿ ನಿತ್ಯ 9000 ಕ್ಯೂಸೆಕ್‌ನಂತೆ ಹದಿನೈದು ದಿನ ಹರಿಸಲು ಸೂಚನೆ ನೀಡಲಾಗಿತ್ತು. ಸಭೆ ಹಿನ್ನೆಲೆ ಮೇಲ್ಮನವಿ ಸಲ್ಲಿಸಿರುವ ಕರ್ನಾಟಕ ರಾಜ್ಯದಿಂದ ಹರಿಸುವ ನೀರಿನ ಪ್ರಮಾಣ ತಗ್ಗಿಸಲು, ಒಂಭತ್ತು ಸಾವಿರದಿಂದ ಎರಡು ಸಾವಿರಕ್ಕೆ ಇಳಿಕೆ ಮಾಡಲು ಮನವಿ ಮಾಡಿದೆ.
ಭವಿಷ್ಯದಲ್ಲಿ ಹೆಚ್ಚು ನೀರು ಹರಿಸಲು ಸಾಧ್ಯವಿಲ್ಲ ಒಳಹರಿವು ಕಡಿಮೆಯಾಗಿರುವ ಹಿನ್ನೆಲೆ ಹೊರ ಹರಿವು ಹೆಚ್ಚಿಸಲು ಸಾಧ್ಯವಿಲ್ಲ ಎಂದ ಕರ್ನಾಟಕ ಮೇಲ್ಮನವಿ ಸಲ್ಲಿಸಿದೆ. ಈ ನಡುವೆ ಬಾಕಿ ನೀರು ಹರಿಸಬೇಕು ತಮಿಳುನಾಡು ತನ್ನ ವಾದ ಮುಂದಿಡಲಿದೆ. ಅಂತಿಮವಾಗಿ ಎಷ್ಟು ಪ್ರಮಾಣದ ನೀರು ಹರಿಸಬೇಕು ಎನ್ನುವ ಬಗ್ಗೆ CWMA ತಿರ್ಮಾನ ಮಾಡಲಿದೆ.
