ಮುಂಬೈ: ಮಹಾರಾಷ್ಟ್ರದ (Maharashtra) ದಿವ್ಯಾಗರ್ ಬೀಚ್ಗೆ (Diveagar Beach) ಪ್ರವಾಸಕ್ಕೆ ತೆರಳಿದ್ದ ಪುಣೆಯ 8 ವಿದ್ಯಾರ್ಥಿಗಳು (Students) ಸಮುದ್ರದ ಪಾಲಾಗಿದ್ದಾರೆ.
ತನ್ಮಯ ದತ್ತಾತ್ರೇಯ ವಾಹಿಲೆ, ಸುಮಿತ್ ಭರತ್ ಅಹಿರೇ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಸಂಕರ್, ರಾಜ್ವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಮ್ ತುಕಾರಾಂ ಭಂಡವಾಳ್ಕರ್ ಮತ್ತು ಕೌಸ್ತುಭ್ ಸಂದೀಪ್ ದೌಂಡ್ ಮೃತರು ಎಂದು ತಿಳಿದು ಬಂದಿದೆ. 48 ಜನ ಬೀಚ್ಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ನೀರಲ್ಲಿ ಆಟ ಆಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಇದನ್ನೂ ಓದಿ: ಗೋವಾ ಬೀಚ್ನಲ್ಲಿ ಕೊಚ್ಚಿ ಹೋದ ಕನ್ನಡಿಗ – ಬಂಡೆ ಮೇಲೆ ಕುಳಿತಿದ್ದಾಗ ಅಲೆಗಳ ರಭಸಕ್ಕೆ ಮುಳುಗಿ ಸಾವು
ಮೃತರೆಲ್ಲರೂ 16 ವರ್ಷ ವಯಸ್ಸಿನವರಾಗಿದ್ದು, ಅವರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳು ಪುಣೆ ಜಿಲ್ಲೆಯ ಅಲಂದಿಯಲ್ಲಿರುವ ‘ವಿನ್ನರ್ಸ್ ಅಕಾಡೆಮಿ’ ಎಂಬ ಖಾಸಗಿ ತರಬೇತಿ ಕೇಂದ್ರದವರಾಗಿದ್ದಾರೆ ಎಂದು ತಿಳಿದುಬಂದಿದೆ. 25 ಹುಡುಗರು, 17 ಹುಡುಗಿಯರು ಮತ್ತು ಆರು ಶಿಕ್ಷಕರನ್ನೊಳಗೊಂಡ 48 ಜನರು ಈ ತಂಡದಲ್ಲಿದ್ದರು.
ವಿದ್ಯಾರ್ಥಿಗಳು ನೀರಿನ ಆಳ ಮತ್ತು ಅಲೆಗಳ ವೇಗವನ್ನು ಅಂದಾಜಿಸದೆ ಸಮುದ್ರಕ್ಕೆ ಇಳಿದಿದ್ದು, ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋದ ವಿಚಾರ ತಿಳಿಯುತ್ತಿದ್ದಂತೆ, ದಿವ್ಯಾಗರ್ನ ‘ಭಾವು ಮಾರುತಿ ಸಾಳುಂಖೆ ಮಹಾಕಾಳಿ ವಾಟರ್ ಸ್ಪೋರ್ಟ್ಸ್’ನ ಮಾಲೀಕ ಭಾವು ಸಾಳುಂಖೆ ಮತ್ತು ಅವರ ತಂಡ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿತು. ಆದರೂ ವಿದ್ಯಾರ್ಥಿಗಳನ್ನು ಬಚಾವ್ ಮಾಡಲು ಅವರಿಗೆ ಸಾಧ್ಯವಾಗಿಲ್ಲ. 8 ವಿದ್ಯಾರ್ಥಿಗಳ ಶವವನ್ನು ಅವರ ತಂಡ ಸಮುದ್ರದಿಂದ ಹೊರತೆಗೆದಿದೆ.
ಸ್ಥಳಕ್ಕೆ ಧಾವಿಸಿದ ದಿಘಿ ಸಾಗರಿ ಬೋರ್ಲಿ ಪಂಚತನ್ ಪೊಲೀಸ್ ಠಾಣೆಯ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಕುಡ್ಲೇ ಬೀಚ್ನಲ್ಲಿ ಮುಳುಗುತ್ತಿದ್ದ ಕಜಕಿಸ್ತಾನದ ಮಹಿಳೆಯ ರಕ್ಷಣೆ

