BBK 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಇದೀಗ ತಾಂಡವ್ ರಾಮ್ ರೀ-ಎಂಟ್ರಿ ಕೊಟ್ಟಿದ್ದಾರೆ. ಎಮರ್ಜೆನ್ಸಿ ರೂಮ್ ಮೂಲಕ ಮನೆಯಿಂದ ಹೊರಗೆ ಹೋಗಿದ್ದ ರಾಮ್, ಇದೀಗ ಹೊಸ ಅವತಾರದಲ್ಲಿ ದೊಡ್ಮನೆಗೆ ಮರಳಿದ್ದಾರೆ.
ಕ್ಯಾಪ್ಟನ್ಸಿ ರೂಮ್ ಮೂಲಕ ಭರ್ಜರಿ ಎಂಟ್ರಿ ಕೊಟ್ಟ ರಾಮ್, ಮನೆಯವರಿಗೆ ಸರ್ಪ್ರೈಸ್ ನೀಡಿದ್ದಾರೆ. ರಾಮ್ ಬರುತ್ತಿದ್ದಂತೆ ಮನೆಯವರೆಲ್ಲ ಚೀರ್ ಮಾಡಿ ಸ್ವಾಗತಿಸಿದ್ದಾರೆ. ಒಳಗೆ ಬಂದ ಕೂಡಲೇ ತಮ್ಮ ಕುಚಿಕು ಗಗನ್ ಅವರನ್ನು ಮೊದಲು ತಬ್ಬಿಕೊಂಡಿದ್ದಾರೆ ರಾಮ್.

ಇದಕ್ಕೂ ಮುನ್ನ ಮನೆಯಲ್ಲಿದ್ದಾಗ ಒಳ್ಳೆಯವನಾಗಿ ಕಾಣಿಸಿಕೊಂಡಿದ್ದ ರಾಮ್, ಇದೀಗ ತಮ್ಮ ಆಟದ ಸ್ಟೈಲ್ ಬದಲಿಸಿಕೊಳ್ಳುವ ಸುಳಿವು ನೀಡಿದ್ದಾರೆ. “ತುಂಬಾ ಒಳ್ಳೆಯವನಾಗಿ ಇದ್ದಿದ್ದು ಸಾಕು. ಮೊದಲು ಇದ್ದ ಒಳ್ಳೆ ರಾಮ್‌ನನ್ನು ಇನ್ನು ಮುಂದೆ ನಿರೀಕ್ಷೆ ಮಾಡಬೇಡಿ” ಎಂದು ಹೇಳುವ ಮೂಲಕ ಮನೆಯವರಿಗೆ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ಮಂಜ, ಲಿಖಿತ್ ಎಡವಟ್ಟು – ಒಟ್ಟಾಗಿ ಸೇರಿ ಗಾನವಿಯನ್ನ ಜೈಲಿಗೆ ಕಳುಹಿಸಿದ ದೊಡ್ಮನೆ ಮಂದಿ

ಹೊಸ ಕ್ಯಾಪ್ಟನ್ ಆಗಿ ತಾಂಡವ್ ರಾಮ್ ದೊಡ್ಮನೆಗೆ ಕಾಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ರಾಮ್ ಅವರ ಈ ರೀಎಂಟ್ರಿ ಬಿಗ್ ಬಾಸ್ ಮನೆಯಲ್ಲಿ ಹೊಸ ತಿರುವಿಗೆ ಕಾರಣವಾಗುವ ಸಾಧ್ಯತೆ ಇದೆ.ಇದನ್ನೂ ಓದಿ: ಸಂಗೀತಾ, ಆಸಿಯಾ, ಕಾವ್ಯ, ಸೌಂದರ್ಯ ಸ್ಪರ್ಧಿಗಳ ಆಟ ವೈಷ್ಣವಿ ಪ್ರಕಾರ ಹೇಗಿದೆ?

