ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ (IPL Trophy) ಮುಡಿಗೇರಿಸಿಕೊಂಡು ಇತಿಹಾಸ ಬರೆದಿರಬಹುದು. ಆದರೆ, ಈ ಮಹಾಫೈನಲ್ ಗೆಲುವಿನ ಬೆನ್ನಲ್ಲೇ ಆರ್‌ಸಿಬಿ ತಂಡದ ಅನುಭವಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ(Krunal Pandya) ಅಪರೂಪದ ವೈಯಕ್ತಿಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ತಾವು ಆಡಿದ ಎಲ್ಲಾ 5 ಫೈನಲ್ ಪಂದ್ಯಗಳಲ್ಲೂ ಟ್ರೋಫಿ ಎತ್ತಿಹಿಡಿಯುವ ಮೂಲಕ ಕೃನಾಲ್ ಪಾಂಡ್ಯ ಕ್ರಿಕೆಟ್ ವಲಯದ ಪಾಲಿನ ‘ಲಕ್ಕಿ ಚಾರ್ಮ್’ ಹಾಗೂ ‘ಅನ್‌ಬೀಟನ್ ಚಾಂಪಿಯನ್’ ಆಗಿ ಹೊರಹೊಮ್ಮಿದ್ದಾರೆ!
ಕೃನಾಲ್ ಪಾಂಡ್ಯ ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 5 ಬಾರಿ ಫೈನಲ್ ಪಂದ್ಯಗಳನ್ನು ಆಡಿದ್ದು, ವಿಶೇಷ ಎಂದರೆ ಆ ಐದೂ ಬಾರಿಯೂ ಅವರು ಪ್ರತಿನಿಧಿಸಿದ ತಂಡಗಳೇ ಚಾಂಪಿಯನ್ ಆಗಿ ಹೊರಹೊಮ್ಮಿವೆ. 2017, 2019, 2020 ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಿತ್ತು. ಈ ಅವಧಿಯಲ್ಲಿ ಕೃನಾಲ್ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು.
ಮುಂಬೈ ತೊರೆದು ಆರ್‌ಸಿಬಿ ಸೇರಿದ ಕೃನಾಲ್, ಕಳೆದ ವರ್ಷ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಕಪ್ ಗೆಲ್ಲುವಲ್ಲಿ ಬಿಗ್ ರೋಲ್ ಪ್ಲೇ ಮಾಡಿದ್ದರು. ಪ್ರಸಕ್ತ ಸಾಲಿನ ಐಪಿಎಲ್ ಫೈನಲ್‌ನಲ್ಲೂ ಗುಜರಾತ್ ಟೈಟನ್ಸ್ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಕೃನಾಲ್ ತಮ್ಮ ಐದನೇ ಐಪಿಎಲ್ ಕಪ್ ಮುಡಿಗೇರಿಸಿಕೊಂಡಿದ್ದಾರೆ.

ಕ್ರಿಕೆಟ್‌ನಲ್ಲಿ ಎಷ್ಟೋ ದಿಗ್ಗಜ ಆಟಗಾರರು ಹಲವು ಫೈನಲ್ ಪಂದ್ಯಗಳನ್ನು ಆಡಿದ್ದರೂ ರನ್ನರ್ಸ್-ಅಪ್ ಪ್ರಶಸ್ತಿಯನ್ನು ಪಡೆದ ಉದಾಹರಣೆಗಳಿವೆ. ಆದರೆ, ಕೃನಾಲ್ ಪಾಂಡ್ಯ ಮಾತ್ರ ತಾವು ಆಡಿದ ಯಾವುದೇ ಐಪಿಎಲ್ ಫೈನಲ್‌ನಲ್ಲೂ ಸೋತ ಇತಿಹಾಸವೇ ಇಲ್ಲ! 5 ಫೈನಲ್ ಪಂದ್ಯಗಳು, 5 ಟ್ರೋಫಿ ಗೆಲುವುಗಳೊಂದಿಗೆ ಕೃನಾಲ್ ಐಪಿಎಲ್‌ನ ಅತ್ಯಂತ ಯಶಸ್ವಿ ಆಟಗಾರರ ಸಾಲಿಗೆ ಸೇರಿದ್ದಾರೆ.
ನಲ್‌ನಲ್ಲಿ ಜಿಟಿ ಬ್ಯಾಟರ್ ಬಟ್ಲರ್ ಅವರ ಪ್ರಮುಖ ವಿಕೆಟ್ ಪಡೆಯುವ ಮೂಲಕ ಕೃನಾಲ್ ಆರ್‌ಸಿಬಿ ಗೆಲುವಿಗೆ ಬೌಲಿಂಗ್‌ನಲ್ಲಿ ನೆರವಾಗಿದ್ದರು. ಸದ್ಯ ಆರ್‌ಸಿಬಿ ತಂಡ ಸತತ ಎರಡನೇ ಬಾರಿ ಕಪ್ ಗೆದ್ದ ಸಂಭ್ರಮದಲ್ಲಿದ್ದರೆ, ಕೃನಾಲ್ ಪಾಂಡ್ಯ ಮಾತ್ರ ತಮ್ಮ ಈ ‘ಪಂಚರತ್ನ’ ಗೆಲುವಿನ ಅಪರೂಪದ ದಾಖಲೆಯೊಂದಿಗೆ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.
