Dakshina KannadaDistrictsKarnatakaLatestMain Post

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ.

ಮಂಗಳೂರಿನ ಮೋರ್ಗನ್ಸ್ ಗೇಟ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಾಗಲಕೋಟೆಯ ಬೀಳಗಿ ಗ್ರಾಮದ ನಿವಾಸಿ ನಾಗೇಶ್ ಶೆರಗುಪ್ಪಿ(30), ಆತನ ಪತ್ನಿ ವಿಜಯಲಕ್ಷ್ಮಿ(26), ಮಕ್ಕಳಾದ ಸ್ವಪ್ನಾ(8) ಹಾಗೂ ಸಮರ್ಥ್(6) ಮೃತ ದುರ್ದೈವಿಗಳು. ಕುಟುಂಬದ ಯಜಮಾನ ನಾಗೇಶ್ ಶೆರಗುಪ್ಪಿ, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಆಹಾರದಲ್ಲಿ ವಿಷ ಹಾಕಿಕೊಂಡು ಬಳಿಕ ಮನೆಯೊಳಗೆ ನಾಗೇಶ್, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಗೇಶ್ ಮಂಗಳೂರಿನಲ್ಲಿ ಚಾಲಕನಾಗಿದ್ದು, ವಿಜಯಲಕ್ಷ್ಮಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ನಾಗೇಶ್ ಪ್ರತಿದಿನ ಕುಡಿದು ಬಂದು ಹೆಂಡತಿ ಜೊತೆ ಜಗಳ ಮಾಡುತ್ತಿದ್ದನು. ಇದೇ ಕಾರಣಕ್ಕೆ ಪತ್ನಿ, ಮಕ್ಕಳಿಗೆ ವಿಷ ಹಾಕಿ ನಾಗೇಶ್ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ನಡುವೆ ಮೃತ ನಾಗೇಶ್ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ನೂರ್ ಜಹಾನ್ ಎಂಬಾಕೆ ಹೆಸರು ಬರೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್

ನೂರ್ ಜಹಾನ್ ಎಂಬಾಕೆಯೆ ಮನೆಯಲ್ಲಿ ಕೆಲಸಕ್ಕಿದ್ದ ತನ್ನ ಪತ್ನಿ ವಿಜಯಲಕ್ಷ್ಮಿಯನ್ನು ನೂರ್ ಜಹಾನ್ ಮತಾಂತರ ಮಾಡಿರುವ ಶಂಕೆ ಇದೆ ಎಂದು ಬರೆಯಲಾಗಿದೆ. ಹೀಗಾಗಿ ಪೊಲೀಸರು ನೂರ್ ಜಹಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ:  ಖ್ಯಾತ ಫೋಟೋಗ್ರಾಫರ್ ತೆಗೆದಿರುವ ಸೂರ್ಯನ ಒಂದು ಫೋಟೋಗೆ 3766ರೂ.!

Leave a Reply

Your email address will not be published.

Back to top button