ಬಾಲಿವುಡ್‌ನ ಫೇಮಸ್ ನಿರ್ದೇಶಕ ಕರಣ್ ಜೋಹರ್ (Karan Johar) ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದಾರೆ. ಏಕಾಏಕಿ ಇನ್‌ಸ್ಟಾಗ್ರಾಮ್‌ನಿಂದ (Instagram) ತಮ್ಮ ಆಪ್ತ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಆಲಿಯಾ ಭಟ್, ಅನನ್ಯಾ ಪಾಂಡೆ, ಮನೀಷ್ ಮಲ್ಹೋತ್ರಾ ಸೇರಿದಂತೆ ಹಲವರನ್ನು ಅನ್‌ಫಾಲೋ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಆದರೆ ಕರಣ್ ಜೋಹರ್ ಬಹುಭಾಷಾ ನಟಿ ಪ್ರಿಯಾಂಕಾ ಚೋಪ್ರಾ (Priyanka chopra) ಅವರನ್ನು ಮಾತ್ರ ಅನ್‌ಫಾಲೋ ಮಾಡದೆ ಹಾಗೆಯೇ ಫಾಲೋ ಲಿಸ್ಟ್‌ನಲ್ಲಿ ಉಳಿಸಿಕೊಂಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಉಳಿದ ಎಲ್ಲ ಬಾಲಿವುಡ್ ಸ್ನೇಹಿತರನ್ನು ಅನ್‌ಫಾಲೋ ಮಾಡಿದರೂ ಪ್ರಿಯಾಂಕಾ ಮಾತ್ರ ಪಟ್ಟಿಯಲ್ಲಿ ಉಳಿದಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಇದಕ್ಕೆ ಕಾರಣ ಏನು? ಪ್ರಿಯಾಂಕಾ ಮಾತ್ರ ಸ್ಪೆಷಲ್ ಯಾಕೆ? ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ರವಿಚಂದ್ರನ್ ವಿರುದ್ಧ ರೇಪ್ ಆರೋಪ ಮಾಡಿದ್ದ `ಹಳ್ಳಿಮೇಷ್ಟ್ರು’ ನಟಿ ಕಣ್ಣೀರು – 34 ವರ್ಷಗಳ ಬಳಿಕ ಕ್ಷಮೆಯಾಚನೆ!

ಈ ಬಗ್ಗೆ ಸ್ವತಃ ಕರಣ್ ಜೋಹರ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದು ಡಿಜಿಟಲ್ ಡಿಟಾಕ್ಸ್. ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಸಮಯ ಕಳೆಯಬಾರದು ಅಂತ ಎಲ್ಲರನ್ನೂ ಅನ್‌ಫಾಲೋ ಮಾಡುತ್ತಿದ್ದೇನೆ. ಇದನ್ನು ದೊಡ್ಡ ನ್ಯಾಷನಲ್ ಸುದ್ದಿಯನ್ನಾಗಿ ಮಾಡಬೇಡಿ ಎಂದು ವ್ಯಂಗ್ಯವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಆದರೆ ಕರಣ್ ಜೋಹರ್ ಅವರ ಈ ನಡೆಗೆ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ಉತ್ತರಿಸಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್‌ನಿಂದ ಬಹಿಷ್ಕರಿಸಬೇಕು ಅಂದುಕೊಂಡಿದ್ದ ನಟಿಯನ್ನೇ ಈಗ ಪ್ರಿಯಾರಿಟಿ ಲಿಸ್ಟ್‌ನಲ್ಲಿ ಸೇರಿಸಿದ ನಿರ್ದೇಶಕ ಎಂದು ನೆಟ್ಟಿಗರು ಕರಣ್ ಜೋಹರ್ ಅವರ ಕಾಲೆಳೆದಿದ್ದಾರೆ.


ಇನ್ನೂ ಕೆಲವರು, ನೀವು ಅನ್‌ಫಾಲೋ ಮಾಡಿದ್ದನ್ನು ನಾವು ಗಮನಿಸಿಯೇ ಇರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋದಕ್ಕೆ ಇದನ್ನೆಲ್ಲಾ ಮಾಡೋ ಅವಶ್ಯಕತೆ ಇತ್ತಾ? ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಮೇ 25ರಂದು ಕರಣ್ ಜೋಹರ್ 54ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಹಿನ್ನೆಲೆ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ತಮ್ಮ ಮನೆಯಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್, ಕಾಜೋಲ್, ರಾಣಿ ಮುಖರ್ಜಿ, ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇನ್ನೊಂದೆಡೆ ಮನೀಷ್ ಮಲ್ಹೋತ್ರಾ, ಕರಣ್ ಜೊತೆಗಿನ 30 ವರ್ಷದ ಸ್ನೇಹವನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡಿದ್ದರು.ಇದನ್ನೂ ಓದಿ: ಬಾಬಿ ಡಿಯೋಲ್ ಜೊತೆ `ಲವ್’ – ಜೀವನದ ಅದ್ಭುತ ಘಳಿಗೆ ಎಂದ ಪೂಜಾ ಭಟ್
