ಚಿಕ್ಕಬಳ್ಳಾಪುರ: ಕಾರು ಹಾಗೂ ಬೊಲೆರೋ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಜಾಲಿ ರೈಡ್ಗೆ ಬಂದಿದ್ದ ನಾಲ್ಕು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ನಂದಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ.
ಮೃತ ಯುವಕರನ್ನು ಯಲಹಂಕದ ಕೊಂಡಪ್ಪ ಬಡಾವಣೆ ನಿವಾಸಿಗಳಾದ ವೈಷ್ಣವ್, ಸಿದ್ದಾರ್ಥ್, ಶ್ರೇಯಸ್ ಹಾಗೂ ಯಶವಂತ್ ಎಂದು ಗುರುತಿಸಲಾಗಿದೆ. ಗಾಯಾಳು ದಿನೇಶ್ನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬುಲೆಟ್ ರೈಲು ಯೋಜನೆ ವೆಚ್ಚ ದುಪ್ಪಟ್ಟು: 2.02 ಲಕ್ಷ ಕೋಟಿಗೆ ಏರಿಕೆ
ಬೆಟ್ಟ ಹಲಸೂರು ಬಳಿ ಬಂಡೆಯಲ್ಲಿ ಈಜಾಡಿ ನಂತರ ಜಾಲಿ ರೈಡ್ಗಾಗಿ ಕೆಎ 04 ಎಂಎ 4680 ಫೋರ್ಡ್ ಕಾರಿನಲ್ಲಿ ಚಿಕ್ಕಬಳ್ಳಾಪುರದ ಕಡೆಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ತೆರಳುವಾಗ ಒಂದು ಬದಿಯಿಂದ ಕಾರು ತೆರಳುತ್ತಿತ್ತು. ಇದೇ ವೇಳೆ ಇನ್ನೊಂದು ಬದಿಯಲ್ಲಿ ಬೊಲೆರೋ ಗೂಡ್ಸ್ ವಾಹನಕ್ಕೆ ಹೊರಡಿದ್ದು, ಎರಡು ವಾಹನ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಗುಗುಜ್ಜಾಗಿದೆ.
ಅಪಘಾತದ ವೇಳೆ ಗೂಡ್ಸ್ ವಾಹನದ ಚಾಲಕನಿಗೆ ಕೂಡ ಕಾಲು ಮುರಿದಿದೆ.ಇದನ್ನೂ ಓದಿ: ಇ-ಕಾಮರ್ಸ್ ವೇದಿಕೆಗಳಲ್ಲಿ ಸ್ಫೋಟಕಗಳ ಮಾರಾಟ ನಿಷಿದ್ಧ – ವೆಬ್ಲಿಂಕ್ಗೆ ಬಿತ್ತು ಬರೋಬ್ಬರಿ 20 ಲಕ್ಷ ದಂಡ
