ಕೇನ್ಸ್ 2026 ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡ ಬಳಿಕ ನಟಿ ಐಶ್ವರ್ಯಾ ರೈ ಬಚ್ಚನ್ ವಿರುದ್ಧ ನಡೆದ ಬಾಡಿ ಶೇಮಿಂಗ್ ಮತ್ತು ಟ್ರೋಲಿಂಗ್‌ಗೆ ನಟಿ ಮಾಧುರಿ ದೀಕ್ಷಿತ್ ಬೇಸರ ವ್ಯಕ್ತಪಡಿಸಿದ್ದಾರೆ.
ಐಶ್ವರ್ಯಾ ಕಳೆದ 20 ವರ್ಷಗಳಿಂದ ಕೇನ್ಸ್ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ.
ಐಶ್ವರ್ಯಾರನ್ನು ಅವರ ದೇಹದ ತೂಕ, ಉಡುಪಿನ ಗಾತ್ರ ಅಥವಾ ವಯಸ್ಸಿನ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ. ಅವರು ಸುಂದರವಾಗಿದ್ದಾರೆ. ನೋಡಲು ಮಾತ್ರವಲ್ಲ, ಮನಸ್ಸಿನಿಂದ ಸುಂದರವಾಗಿದ್ದಾರೆ ಎಂದು ಮಾಧುರಿ ಹೇಳಿದ್ದಾರೆ. ಇದನ್ನೂ ಓದಿ: ಕೇನ್ಸ್ ರೆಡ್‌ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ರಾಯಲ್ ಲುಕ್ – ʻಲುಮಿನಾರಾʼದಲ್ಲಿ ಮಾಜಿ ವಿಶ್ವಸುಂದರಿ ಶೈನ್
2002ರಿಂದ ಕೇನ್ಸ್ ಉತ್ಸವದಲ್ಲಿ ಭಾಗವಹಿಸುತ್ತಿರುವ ಐಶ್ವರ್ಯಾ ರೈ, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದರು. ಈ ಬಗ್ಗೆ ಮಾತನಾಡಿದ ಮಾಧುರಿ, ಮಹಿಳೆಯರ ಸಾಧನೆಗಿಂತ ಅವರ ನೋಟವನ್ನು ಹೆಚ್ಚು ಚರ್ಚೆ ಮಾಡುವುದು ತಪ್ಪು ಎಂದು ಹೇಳಿದ್ದಾರೆ.
ಇಂತಹ ಕಾಮೆಂಟ್‌ಗಳು ಯುವಜನತೆಗೆ ತಪ್ಪು ಸಂದೇಶ ನೀಡುತ್ತವೆ. ವ್ಯಕ್ತಿಯ ಮೌಲ್ಯ ಅವರ ಸಾಧನೆಯಿಂದ ಅಳೆಯಬೇಕು, ನೋಟದಿಂದ ಅಲ್ಲ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಬಗ್ಗೆ ಮಾತನಾಡಿದ ಅವರು, ಈಗ ಜನರು ತಮ್ಮ ಅಭಿಪ್ರಾಯಗಳನ್ನು ತಕ್ಷಣ ವ್ಯಕ್ತಪಡಿಸುವ ಅವಕಾಶ ಪಡೆದಿದ್ದಾರೆ. ಆದರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ನಟಿ ತೃಪ್ತಿ ಡಿಮ್ರಿ ಕೂಡ ಐಶ್ವರ್ಯಾ ರೈ ಮತ್ತು ಅನನ್ಯಾ ಪಾಂಡೆ ಪರವಾಗಿ ಮಾತನಾಡಿದ್ದಾರೆ. ಮನೆಯಲ್ಲೇ ಕುಳಿತು ಕಾಮೆಂಟ್ ಮಾಡುವುದು ಸುಲಭ. ಆದರೆ ಯಶಸ್ಸು ಪಡೆಯಲು ಅವರು ಎಷ್ಟು ಶ್ರಮ ಪಟ್ಟಿದ್ದಾರೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ತೃಪ್ತಿ ಹೇಳಿದ್ದಾರೆ.
ಟೀಕೆಗಳು ಕೆಲಸದ ಬಗ್ಗೆ ಇದ್ದರೆ ಸ್ವೀಕರಿಸಬಹುದು. ಆದರೆ ವೈಯಕ್ತಿಕ ವಿಚಾರಗಳನ್ನು ಗುರಿಯಾಗಿಸುವುದು ಬೇಸರ ತರಿಸುತ್ತದೆ ಎಂದು ತೃಪ್ತಿ ಡಿಮ್ರಿ ಹೇಳಿದ್ದಾರೆ. ಇದನ್ನೂ ಓದಿ: ಮೊದಲ ಬಾರಿ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಪ್ರಿಯಾಂಕ ಉಪೇಂದ್ರ
