ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ (Cabinet Expansion) ಯಾವಾಗ ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಆದರೆ, ಲೋಕಭವನದಲ್ಲಿ ಒಂದಷ್ಟು ಸಿದ್ಧತೆಗಳು ನಡೆಯುತ್ತಿವೆ.
ರಾಜಭವನದಲ್ಲಿ ಕಾರ್ಯಕ್ರಮ ನಡೆಸಲು ಬೇಕಾದಂತಹ ಸಿದ್ಧತೆ ನಡೆಯುತ್ತಿದೆ. ರಾಜಭವವನದ ಮುಂದೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಭದ್ರತೆ ನೀಡಲಾಗಿದೆ. ಶಾಮಿಯಾನ ಹಾಗೂ ಆಸನಗಳನ್ನು ತರಲಾಗುತ್ತಿದೆ. ಇದನ್ನೂ ಓದಿ: ಫುಟ್‌ಪಾತ್ ತೆರವಿಗೆ ಜನರು ಸಹಕಾರ ಕೊಡಬೇಕು: ಪರಮೇಶ್ವರ್
ಒಂದು ಹಂತದಲ್ಲಿ ದೆಹಲಿಯಲ್ಲಿ ಹೈಕಮಾಂಡ್ ಅಂಗಳದಲ್ಲಿ ಇಂದೇ ಪಟ್ಟಿ ಫೈನಲ್ ಆದರೆ ನಾಳೆಯೇ ಸಂಪುಟ ವಿಸ್ತರಣೆ ಎನ್ನಲಾಗಿತ್ತು. ತಡರಾತ್ರಿ ಹೈಕಮಾಂಡ್ ಜೊತೆ ಸಭೆ ನಡೆದರೆ ನಾಳೆಯೇ ಸಂಪುಟ ವಿಸ್ತರಣೆ ಆಗಬಹುದು. ಮಾತುಕತೆ ನಾಳೆ ನಡೆದರೆ ಇನ್ನೆರಡು ದಿನದಲ್ಲಿ ಸಂಪುಟ ವಿಸ್ತರಣೆ ನಡೆಯಬಹುದು. ಆದರೆ, ರಾಜಭವನದಲ್ಲಿ ಮಾತ್ರ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ.
