ಈ ಬಾರಿ ನಡೆದ ಫ್ರಾನ್ಸ್‌ನಲ್ಲಿ ನಡೆದ ಫೇಮಸ್ ಕೇನ್ಸ್ ಫಿಲ್ಮ್ ಫೆಸ್ಟಿವಲ್ (2026 Cannes Film Festival) ಕನ್ನಡದ ನಟಿ ಪ್ರಿಯಂಕಾ ಉಪೇಂದ್ರ (Priyanka Upendra) ಅವರು ತಮ್ಮ ಆಕರ್ಷಕ ಲುಕ್‌ನಿಂದ ಎಲ್ಲರ ಗಮನ ಸೆಳೆದರು. ಈ ಬಾರಿ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ ಕನ್ನಡದ ಸೆಲೆಬ್ರಿಟಿಗಳಲ್ಲಿ ಪ್ರಮುಖರಗಿದ್ದ ಪ್ರಿಯಂಕಾ ಅವರು ರೆಡ್ ಕಾರ್ಪೆಟ್ (Red Capet) ಮೇಲೆ ಎಲ್ಲರ ಗಮನ ಸೆಳೆದರು.
ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್‌ನಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಈ ಬಾರಿ “ಎಲಿಗೆಂಟ್ ಇಂಡಿಯನ್ ಗ್ಲಾಮರ್” ಥೀಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್‌ನಲ್ಲಿ ಸರಳತೆ, ರಾಯಲ್ ಸ್ಟೈಲ್ ಹಾಗೂ ಕ್ಲಾಸಿಕ್ ಫ್ಯಾಷನ್ ಮಿಶ್ರಣ ಸ್ಪಷ್ಟವಾಗಿ ಕಾಣಿಸಿತು.
ಪ್ರಿಯಾಂಕಾ ಉಪೇಂದ್ರ ಧರಿಸಿದ್ದ ಉಡುಪು ಹೆಚ್ಚು ಮಿಂಚುವಂತಿರದೆ, ಸಾಫ್ಟ್ ಹಾಗೂ ಕ್ಲಾಸಿ ಸ್ಟೈಲ್‌ನಲ್ಲಿ ಗಮನ ಸೆಳೆಯಿತು. ರೆಡ್ ಕಾರ್ಪೆಟ್‌ಗೆ ತಕ್ಕಂತೆ ಆಯ್ಕೆ ಮಾಡಿಕೊಂಡಿರುವ ಆಭರಣಗಳು ಮತ್ತು ಮಿನಿಮಲ್ ಮೇಕಪ್ ಅವರ ಲುಕ್‌ಗೆ ಇನ್ನಷ್ಟು ಎಲಿಗೆನ್ಸ್ ನೀಡಿದ್ದವು.
View this post on Instagram
ಅವರ ಸಂಪೂರ್ಣ ಲುಕ್‌ನಲ್ಲಿ “ಲೆಸ್ ಈಸ್ ಮೋರ್” ಎಂಬ ಫ್ಯಾಷನ್ ಕಾನ್ಸೆಪ್ಟ್ ಸ್ಪಷ್ಟವಾಗಿ ಕಂಡುಬಂದಿತು. ಅತಿಯಾಗಿ ಗ್ಲಾಮರ್ ತೋರಿಸದೆ, ಸಿಂಪಲ್ ಶೈಲಿಯ ಮೂಲಕವೇ ರಾಯಲ್ ಲುಕ್ ನೀಡಿರುವುದು ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
‘ಸೆಪ್ಟೆಂಬರ್ 21’ ಚಿತ್ರದ ವರ್ಲ್ಡ್ ಪ್ರೀಮಿಯರ್ ಹಿನ್ನೆಲೆಯಲ್ಲಿ ಕೇನ್ಸ್‌ನಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಉಪೇಂದ್ರ, ತಮ್ಮ ಲುಕ್ ಮೂಲಕ ಕನ್ನಡ ಸಿನಿರಂಗದ ಘನತೆಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮತ್ತಷ್ಟು ಹೆಚ್ಚಿಸಿದ್ದಾರೆ.
ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ವಾಕ್ ಮಾಡುವುದು ಅನೇಕ ಕಲಾವಿದರ ಕನಸಾಗಿದೆ. ಆ ಕನಸನ್ನು ಇದೀಗ ಪ್ರಿಯಾಂಕಾ ಉಪೇಂದ್ರ ಸಾಕಾರಗೊಳಿಸಿದ್ದು, ಕನ್ನಡ ಸಿನಿ ಪ್ರೇಕ್ಷಕರಿಗೂ ಹೆಮ್ಮೆಯ ಕ್ಷಣವಾಗಿದೆ.
