ಜಾಗತಿಕ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ನ (Oscar) ವಿಷ್ಯುವಲ್ ಎಫೆಕ್ಟ್ (ದೃಶ್ಯ ಪರಿಣಾಮ) ಅಗ್ರ 20 ಸಿನಿಮಾಗಳ ಸಾಲಿನಲ್ಲಿ ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ (Ramayana) ಸಿನಿಮಾವು ಸ್ಥಾನ ಪಡೆದುಕೊಂಡಿದೆ.
99 ನೇ ಅಕಾಡೆಮಿ ಪ್ರಶಸ್ತಿಗಳ ದೃಶ್ಯ ಪರಿಣಾಮಗಳ ವಿಭಾಗದಲ್ಲಿ ಅಗ್ರ 20 ಸಿನಿಮಾಗಳ ಸಾಲಿನಲ್ಲಿ ರಾಮಾಯಣ ಸ್ಥಾನ ಪಡೆದಿದೆ. ಹಾಲಿವುಡ್ನ ಪ್ರಮುಖ ನಿರ್ಮಾಣಗಳಾದ ‘ಡ್ಯೂನ್: ಪಾರ್ಟ್ ತ್ರೀ’, ‘ದಿ ಒಡಿಸ್ಸಿ’ ಮತ್ತು ‘ಅವೆಂಜರ್ಸ್: ಡೂಮ್ಸ್ಡೇ’ ಈ ಸಾಲಿನಲ್ಲಿವೆ. ಇದನ್ನೂ ಓದಿ: ಕಲೆಕ್ಷನ್ನಲ್ಲಿ ‘ರಾಮಾಯಣ’ ಅಬ್ಬರ; ಪುಷ್ಪ 2 ಜೀವಮಾನದ ಗಳಿಕೆ ದಾಖಲೆ ಮುರಿಯಲು ಕೇವಲ 7 ಕೋಟಿ ಬಾಕಿ
ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ (Yash) ರಾವಣನಾಗಿ ನಟಿಸಿರುವ ಈ ಪೌರಾಣಿಕ ಮಹಾಕಾವ್ಯವು ಸೋನಿ ಪಿಕ್ಚರ್ಸ್ನ ಮೂರು ಯೋಜನೆಗಳಲ್ಲಿ ಒಂದಾಗಿದೆ.
ಥ್ಯಾಂಕ್ಸ್ಗಿವಿಂಗ್ ರಜೆಗೆ ಮುಂಚಿತವಾಗಿ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS) ನ ವಿಷುಯಲ್ ಎಫೆಕ್ಟ್ಸ್ ವಿಭಾಗವು 20 ಚಲನಚಿತ್ರಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿವೆ ಎಂದು ತಿಳಿಸಿದೆ. ಆದಾಗ್ಯೂ, ಸಂಸ್ಥೆಯು ಇನ್ನೂ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಿಲ್ಲ.
2023 ರಲ್ಲಿ, ಎಸ್.ಎಸ್.ರಾಜಮೌಳಿ ಅವರ RRR ಸಿನಿಮಾ 95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ದೃಶ್ಯ ಪರಿಣಾಮಗಳ ವಿಭಾಗದಲ್ಲಿ ಅಗ್ರ 20 ಸ್ಪರ್ಧಿಗಳಲ್ಲಿ ಸ್ಥಾನ ಪಡೆದಿತ್ತು. ಆದರೆ ಅಂತಿಮ ನಾಮನಿರ್ದೇಶನಗಳಿಗೆ ಬರಲಿಲ್ಲ. ಇದನ್ನೂ ಓದಿ: ‘ರಾಮಾಯಣ’ ಗಲ್ಲಾಪೆಟ್ಟಿಗೆಯಲ್ಲಿ ಝಣಝಣ ಕಾಂಚಾಣ – ವಿಶ್ವಾದ್ಯಂತ 1,704 ಕೋಟಿ ರೂ. ಕಲೆಕ್ಷನ್
ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ನಟನೆಯ ಸಿನಿಮಾವು ‘ನಾಟು ನಾಟು’ ಸಾಂಗ್, ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
