-ಇಂದೂ ನಡೆಯಲಿದೆ ರಣರೋಚಕ ಸ್ಪರ್ಧೆ, ಆಕರ್ಷಕ ಬಹುಮಾನಗಳು
ಬಿಹಾರ: ಇಲ್ಲಿ ನಡೆದ ಮದುವೆಯೊಂದು ದೇಶದ ಗಮನ ಸೆಳೆದಿದೆ. ಬಿಹಾರದ (Bihar) ಮೊಕಾಮಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ (Ananth Singh) ಅವರು ತಮ್ಮ ಕಿರಿಯ ಪುತ್ರಿ ಶಿವಾಂಗಿ ಸಿಂಗ್ ಅವರ ಮದುವೆಯನ್ನು ದೇಶದಲ್ಲೇ ಚರ್ಚೆಯಾಗುವಂತೆ ಮಾಡಿದ್ದಾರೆ. ಮದುವೆ ಮಾತ್ರವಲ್ಲದೇ ಬರುವ ಅತಿಥಿಗಳಿಗಾಗಿ ರಣರೋಚಕ ಸ್ಪರ್ಧೆಗಳನ್ನು ಆಯೋಜಿಸಿ, ಆಕರ್ಷಕ ಬಹುಮಾನಗಳನ್ನು ನೀಡಿದ್ದಾರೆ.
ಬಿಹಾರದ ಮೊಕಾಮಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ಅವರ ಕಿರಿಯ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹ ನಿನ್ನೆ (ನ.25) ಪಾಟ್ನಾ ಜಿಲ್ಲೆಯ ನಡ್ವಾನ್ ಗ್ರಾಮದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮದುವೆ ಸಮಾರಂಭಕ್ಕೆ ಸುಮಾರು ನಾಲ್ಕರಿಂದ ಐದು ಲಕ್ಷ ಜನರು ಭಾಗಿಯಾಗಿದ್ದರು. ಬಿಹಾರ್ ಜನರು ರೈಲು ಬಸ್ ಅಂತಾ ಸಿಕ್ಕ ಸಿಕ್ಕ ವಾಹನಗಳನ್ನು ಹತ್ತಿ ಮದುವೆಯಲ್ಲಿ ಭಾಗಿಯಾಗಿ ವೈಭವನ್ನು ಕಣ್ತುಂಬಿಕೊಂಡರು. ಇದನ್ನೂ ಓದಿ: ಬಿಹಾರ ಶಾಸಕನ ಪುತ್ರಿಯ ಅದ್ಧೂರಿ ವಿವಾಹಕ್ಕೆ ಜನಸಾಗರ: 10 ಕಿ.ಮೀ. ಟ್ರಾಫಿಕ್ ಜಾಮ್!
#WATCH | Patna, Bihar: Mokama MLA Anant Singh organised a horse race on the occasion of his daughter’s wedding, drawing a massive crowd of spectators, with several people climbing towers to catch a glimpse of the event https://t.co/TOauJltn9W
— ANI (@ANI) November 25, 2026
ಮದುವೆಯ ಪ್ರಮುಖ ಆಕರ್ಷಣೆಗಳಲ್ಲಿ ಕುದುರೆ ಓಟದ ಸ್ಪರ್ಧೆಯೂ ಒಂದಾಗಿತ್ತು. ದೇಶದ ವಿವಿಧ ಭಾಗಗಳಿಂದ 52 ಕುದುರೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿಜೇತರಿಗೆ ಮಹೀಂದ್ರಾ ಥಾರ್ ಕಾರು, ಎರಡನೇ ಸ್ಥಾನ ಪಡೆದವರಿಗೆ ಬೈಕ್ ಹಾಗೂ ಮೂರನೇ ಸ್ಥಾನ ಪಡೆದವರಿಗೆ ಸ್ಕೂಟರ್ ಬಹುಮಾನವಾಗಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ಅಂತಿಮ ಸುತ್ತಿನ ಸ್ಪರ್ಧೆಯನ್ನು ಇಂದಿಗೆ (ನ.26) ಮುಂದೂಡಲಾಗಿದೆ.
ವರ ರಿಷಿಕೇಶ್ ಕುಮಾರ್ ಸಿಆರ್ಪಿಎಫ್ ಕಮಾಂಡೆಂಟ್ ರಣವಿಜಯ್ ಕುಮಾರ್ ಸಿಂಗ್ ಅವರ ಪುತ್ರ. ಎಂಬಿಎ ಪದವೀಧರರಾಗಿರುವ ರಿಷಿಕೇಶ್ ಸುಮಾರು 11 ವರ್ಷ ಅಮೆರಿಕದಲ್ಲಿ ವಾಸವಾಗಿದ್ದರು. ವರನ ಕಡೆಯಿಂದ 151 ವಾಹನಗಳ ಮೆರವಣಿಗೆ ಆಗಮಿಸುವ ವ್ಯವಸ್ಥೆ ಮಾಡಲಾಗಿತ್ತು. ಅತಿಥಿಗಳ ವಾಹನಗಳಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸುಮಾರು 10 ಕಿಲೋಮೀಟರ್ವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಐದು ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿತ್ತು. ಎರಡು ಆನೆಗಳನ್ನು ತರಿಸಲಾಗಿದ್ದು, ವರನ ಕುಟುಂಬವನ್ನು ಸ್ವಾಗತಿಸಲು ಅನಂತ್ ಸಿಂಗ್ ಆನೆಯ ಮೇಲೆ ತೆರಳಿದ್ದರು.ಇದನ್ನೂ ಓದಿ: 100 ಕೋಟಿ ಒಡೆಯ ‘ಛೋಟೆ ಸರ್ಕಾರ್’ ಮಗಳಿಗೆ ಅಮೆರಿಕದ ವರ – ಬಿಹಾರ ಶಾಸಕನ ಪುತ್ರಿ ಓದಿದ್ದೇನು?
Spectators climbed high-voltage electricity towers, poles and trees in Bihar’s Nadwan village to watch a horse race organised as part of the wedding celebrations of Mokama MLA Anant Singh’s daughter. https://t.co/R0TIkis9he
— The Indian Express (@IndianExpress) November 25, 2026
ಮದುವೆಯಲ್ಲಿ ಐದು ಲಕ್ಷ ಜನರಿಗೆ ಸಾಕಾಗುವಷ್ಟು ಊಟದ ಸಿದ್ಧತೆ ಮಾಡಲಾಗಿತ್ತು. 150ಕ್ಕೂ ಹೆಚ್ಚು ಬಗೆಯ ಸಸ್ಯಾಹಾರಿ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಸುಮಾರು 300 ಅಡುಗೆ ಒಲೆಗಳು, 500 ಬಾಣಸಿಗರು ಹಾಗೂ 30 ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು. ಸುಮಾರು 30 ಲಕ್ಷ ರಸಗುಲ್ಲಾಗಳನ್ನು 50 ಲಕ್ಷ ಗುಲಾಮ್ ಜಾಮೂನುಗಳನ್ನು ಉಣಬಡಿಸಲಾಯಿತು.
ವಧುವಿಗೆ ಸುಮಾರು 2.5ರಿಂದ 3 ಕೋಟಿ ರೂ. ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಕೇಂದ್ರ ಸಚಿವ ಲಲನ್ ಸಿಂಗ್, ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಮದುವೆಯಲ್ಲಿ ಭಾಗವಹಿಸಿದ್ದರು. ಭೋಜ್ಪುರಿ ಗಾಯಕ ಪವನ್ ಸಿಂಗ್, ಅಕ್ಷರಾ ಸಿಂಗ್ ಹಾಗೂ ಮೈಥಿಲಿ ಠಾಕೂರ್ ಅವರ ಸಂಗೀತ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.ಇದನ್ನೂ ಓದಿ: 40 ಕೋಟಿ ವೆಚ್ಚದಲ್ಲಿ ಬಿಹಾರ ಶಾಸಕನ ಪುತ್ರಿ ವಿವಾಹ: 150 ಬಗೆಯ ಊಟ, ವರನಿಗೆ 3 ಕೋಟಿಯ ಡಿಫೆಂಡರ್, 180 ಗ್ರಾಂ ಚಿನ್ನ ಗಿಫ್ಟ್
ಇನ್ನೊಂದೆಡೆ, ದೂಲಾರಚಂದ್ ಯಾದವ್ ಹತ್ಯೆ ಪ್ರಕರಣದಲ್ಲಿ ಶಾಸಕ ಅನಂತ್ ಸಿಂಗ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಅಕ್ಟೋಬರ್ 30ರಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠ ಈ ಆದೇಶ ನೀಡಿತ್ತು. ಪುತ್ರಿಯ ಮದುವೆ ನವೆಂಬರ್ 25ರಂದು ಇರುವುದನ್ನು ಪರಿಗಣಿಸಿ ಡಿಸೆಂಬರ್ 1ರೊಳಗೆ ನ್ಯಾಯಾಲಯಕ್ಕೆ ಶರಣಾಗಿ ಮತ್ತೆ ಜೈಲು ಸೇರಲು ಸೂಚಿಸಿತ್ತು. ಅಲ್ಲದೆ, ಪ್ರಕರಣದ ತನಿಖೆಯನ್ನು ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸುವಂತೆ ಬಿಹಾರ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಜೈಲಿಗೆ ಮರಳುವ ಮುನ್ನ ಅವರು ಮಾಡಿದ ಮದುವೆ ಈಗ ದೇಶದ್ಯಾಂತ ಚರ್ಚೆಯಾಗುತ್ತಿದೆ.ಇದನ್ನೂ ಓದಿ:ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ – ಸುಪ್ರೀಂಕೋರ್ಟ್ನಲ್ಲಿ ರಾಹುಲ್ ಗಾಂಧಿಗೆ ರಿಲೀಫ್
