ಬೀದರ್: ಭೂ ಕಬಳಿಕೆ (Land Grabbing) ಸಂಬಂಧ ಶಾಸಕ ಪ್ರಭು ಚೌಹಾಣ್ಗೆ (Prabhu Chauhan) ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯದಿಂದ ನೋಟಿಸ್ (Notice) ಜಾರಿಯಾಗಿದೆ.
2027 ಜನವರಿ 19ರ ಒಳಗೆ ನೋಟಿಸ್ಗೆ ಪ್ರತಿಕ್ರಿಯೆ ನೀಡಲು ಸೂಚನೆ ನೀಡಲಾಗಿದೆ. ಬೀದರ್ ತಾಲೂಕಿನ ಕೊಳ್ಳಾರ ಗ್ರಾಮದ ಸರ್ವೆ ನಂಬರ್ 102ರಲ್ಲಿ 3 ಎಕರೆ ಜಾಗ ಕಬಳಿಕೆ ಆರೋಪ ಕೇಳಿ ಬಂದಿದ್ದು, ಕಮಲ ನಗರ ತಾಲೂಕಿನ ಚೌಂದೋರಿ ಗ್ರಾಮದ ಗ್ರಾ.ಪಂ ಅಧ್ಯಕ್ಷ ದೀಪಕ್ ಪಾಟೀಲ್ ಕೋರ್ಟ್ಗೆ ದಾವೆ ಹೂಡಿದ್ದರು. ಇದನ್ನೂ ಓದಿ: ಮಕ್ಕಳಂತೆ ಬೆಳೆಸಿದ ತೋಟ ಹೋಯ್ತು, ನನ್ನನ್ನೂ ಆನೆಗಳು ತುಳಿದು ಸಾಯಿಸಲಿ – ತೋಟದಲ್ಲಿ ಕುಳಿತು ರೈತನ ಕಣ್ಣೀರು
ದಾಖಲೆಗಳ ಪ್ರಕಾರ ಈ ಜಮೀನು ಸರ್ಕಾರಕ್ಕೆ ಸೇರಿದ್ದು, ಈ ಹಿಂದೆ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ದೀಪಕ್ ಪಾಟೀಲ್ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಆಶಾಗಳ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ: ಪ್ರತಿಭಟನೆ ವಿರುದ್ಧ ಆರೋಗ್ಯ ಸಚಿವ ಗರಂ
