– ಕಾಂಗ್ರೆಸ್ ಆಡಳಿತದಲ್ಲಿ ಸಂವಿಧಾನ ಆಶಯಗಳಿಗೆ ಧಕ್ಕೆ ಅಂತ ಪ್ರಧಾನಿ ಟೀಕೆ
ನವದೆಹಲಿ: ಒಬಿಸಿ ಕೋಟಾ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲು ವಿಪಕ್ಷಗಳು ಪ್ರಯತ್ನಿಸುತ್ತಿವೆ. ಈ ಕ್ರಮ ಅತ್ಯಂತ ಭಯಾನಕ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಟೀಕಿಸಿದ್ದಾರೆ.
ಸಂವಿಧಾನ ದಿನಾಚರಣೆ (Constitution Day) ಹಿನ್ನೆಲೆ ಸಂವಿಧಾನ ಪ್ರತಿಗೆ ತಾವು ನಮನ ಸಲ್ಲಿಸುತ್ತಿರುವ ಫೋಟೊವನ್ನು ಮೋದಿ ಹಂಚಿಕೊಂಡಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
1949 ನವೆಂಬರ್ 26ರ ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಸ್ಮರಿಸುತ್ತಾ ಪ್ರಧಾನಿ ಮೋದಿ, ಸಂವಿಧಾನದ ರಚನಕಾರರು ತಿರಸ್ಕರಿಸಿದ ಕಾರ್ಯಸೂಚಿಯನ್ನು ವಿರೋಧ ಪಕ್ಷಗಳು ಮುಂದಿಡುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹತ್ತನೇ ದಿನಕ್ಕೆ ಕಾಲಿಟ್ಟ `ಆಶಾ’ ಪ್ರತಿಭಟನೆ – ಮನವೊಲಿಸುವಲ್ಲಿ ಸಕ್ಸಸ್ ಆಗ್ತಾರಾ ಸಿಎಂ?
ವಿರೋಧ ಪಕ್ಷದ ಅತಿದೊಡ್ಡ ಪಕ್ಷವು ಒಬಿಸಿ ಮೀಸಲಾತಿಯನ್ನು ಕಡಿಮೆ ಮಾಡಿ ಮುಸ್ಲಿಂ ಮೀಸಲಾತಿಯನ್ನು ತರಲು ಬಯಸುತ್ತಿರುವುದು ಅತ್ಯಂತ ಭಯಾನಕವಾಗಿದೆ. ನಮ್ಮ ಸಂವಿಧಾನದ ನಿರ್ಮಾಪಕರು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಇದನ್ನು ಸಂಪೂರ್ಣವಾಗಿ ವಿರೋಧಿಸಿದ್ದರು ಎಂದು ಪೋಸ್ಟ್ನಲ್ಲಿ ಮೋದಿ ತಿಳಿಸಿದ್ದಾರೆ.
ವಿರೋಧ ಪಕ್ಷವು ಸಂಸತ್ತಿನಲ್ಲಿ ಅಡಚಣೆ ಉಂಟುಮಾಡುವವರಂತೆ ಬದಲಾಗುತ್ತಿದೆ. ಇದು ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಅವ್ರೋಧ ಪಕ್ಷ (ಅಡಚಣೆ ಮಾಡುವವ)ದಂತೆ ಕಾಣುತ್ತಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಅಡ್ಡಿಪಡಿಸುವುದು, ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ ಪರ್ಯಾಯವಲ್ಲ ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಸೋಲನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅದೇ ವಿರೋಧ ಪಕ್ಷವು ಅದರ ಅಂಗೀಕಾರವನ್ನು ನಿರಾಕರಿಸಿದೆ. ಸಾಂವಿಧಾನಿಕ ಮೌಲ್ಯಗಳ ಬಗ್ಗೆ ತಿರಸ್ಕಾರ ಮನೋಭಾವ ತೋರಿಸಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೆಆರ್ಎಸ್ ಜಲಾಶಯದಲ್ಲಿ ತೀವ್ರ ನೀರಿನ ಅಭಾವ – 95 ಅಡಿಗೆ ಕುಸಿದ ನೀರಿನ ಮಟ್ಟ
ಅವರಿಗೆ ನ್ಯಾಯ ಸಿಗುವುದನ್ನು ಖಚಿತಪಡಿಸಿಕೊಳ್ಳುವುದರಿಂದ ಯಾವುದೇ ಶಕ್ತಿಯು ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ನಾನು ಭಾರತದ ನಾರಿ ಶಕ್ತಿಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.
