– ಮದುವೆ ಕಾರ್ಯಕ್ರಮದಲ್ಲಿ ಸಿಎಂ ಡಿಕೆಶಿ ಭಾಗಿ
ರಾಮನಗರ: ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರ ವಿವಾಹ ಕಾರ್ಯಕ್ರಮ ಇಂದು ರಾಮನಗರದ ಜಾನಪದ ಲೋಕದಲ್ಲಿ (Janapada Loka) ನಡೆಯುತ್ತಿದೆ. ಸರಳವಾಗಿ ಮಂತ್ರಮಾಂಗಲ್ಯ (Mantramangalya) ಪದ್ಧತಿಯಲ್ಲಿ ದರ್ಶನ್ ಧ್ರುವನಾರಾಯಣ್ (Darshan Dhruvanarayan) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದ ಡಾ.ಶ್ರೀನಿಧಿ ಅವರೊಂದಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಅವರ ವಿವಾಹ ನಿಶ್ಚಯವಾಗಿದೆ. ವಿಶೇಷವೆಂದರೆ, ಆಡಂಬರಕ್ಕೆ ಆಸ್ಪದ ನೀಡದೆ, ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಸರಳವಾಗಿ ಮಂತ್ರಮಾಂಗಲ್ಯ ಪದ್ಧತಿಯ ಮೂಲಕ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಶಾಸಕರ ವಿವಾಹ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಸಚಿವ ಸಂಪುಟದ ಹಲವು ಸಚಿವರು, ಶಾಸಕರು ಹಾಗೂ ರಾಜಕೀಯ ಗಣ್ಯರು ಆಗಮಿಸಿ ನವದಂಪತಿಗೆ ಶುಭ ಹಾರೈಸಲಿದ್ದಾರೆ. ಇದನ್ನೂ ಓದಿ: ಹಾಸನ ಆಯ್ತು, ಈಗ ಕೊಡಗಿನಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು
ಇಂದು ಬೆಳಗ್ಗೆ 10:35ಕ್ಕೆ ಚನ್ನಪಟ್ಟಣದ ಪಿಟಿಎಸ್ ಆವರಣದ ಹೆಲಿಪ್ಯಾಡ್ಗೆ ಆಗಮಿಸಲಿರುವ ಸಿಎಂ, ಅಲ್ಲಿಂದ ರಸ್ತೆ ಮಾರ್ಗವಾಗಿ ಜಾನಪದ ಲೋಕಕ್ಕೆ ತೆರಳಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಬೆಳಗ್ಗೆ 11 ಗಂಟೆಗೆ ಪಿಟಿಎಸ್ ಹೆಲಿಪ್ಯಾಡ್ನಿಂದ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ಹತ್ತನೇ ದಿನಕ್ಕೆ ಕಾಲಿಟ್ಟ `ಆಶಾ’ ಪ್ರತಿಭಟನೆ – ಮನವೊಲಿಸುವಲ್ಲಿ ಸಕ್ಸಸ್ ಆಗ್ತಾರಾ ಸಿಎಂ?
