ಕಾಡಿನ ರೂಪ ಪಡೆದುಕೊಂಡಿರುವ ಬಿಗ್ಬಾಸ್ (Bigg Boss) ಮನೆಯಲ್ಲಿ ಈಗಾಗಲೇ ಗುಳ್ಳೆನರಿ, ಕಾಗೆ ಸೇರಿಕೊಂಡಿದೆ. ಇದೀಗ ಕಾಡಿನ ರಾಜ ಸಿಂಹ ಎಂಟ್ರಿಕೊಟ್ಟಿದ್ದು, ಕಾಗೆ ಹಾಗೂ ನರಿ ಬೇಟೆಗೆ ಸಿದ್ಧವಾಗಿದೆ.
ಈಗಾಗಲೇ ಗುಳ್ಳೆನರಿ ತನ್ನ ಚಾಣಾಕ್ಷತೆಯಿಂದ ನಂಬಿಕೆಯ ಮುಖವಾಡ ಧರಿಸಿ, ದ್ರೋಹ ಬಗೆದು ಅಧಿಕಾರ ಪಡೆದುಕೊಳ್ಳಲು ಮುನ್ನುಗುತ್ತಿದ್ದು, ಎರಡು ಟಾಸ್ಕ್ ಮುಗಿಸಿರುವ ಕೆಲಸ `ಯಶಸ್’ವಿ..ಯಾಗಿ ಮಾಡಿದೆ. ಇದನ್ನೂ ಓದಿ: ಒಬಿಸಿ ಕೋಟಾ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲು ವಿಪಕ್ಷ ಬಯಸುತ್ತಿದೆ: ಸಂವಿಧಾನ ದಿನದಂದು ಮೋದಿ ಮಾತು
ಈಗೇನ್ ಮಾಡುತ್ತೆ ಗುಳ್ಳೆನರಿ?
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/YyGAfT6vdl
— Colors Kannada (@ColorsKannada) November 26, 2026
ಇದೀಗ ಬಿಗ್ಬಾಸ್ ಮನೆಗೆ ಸಿಂಹ ಎಂಟ್ರಿಕೊಟ್ಟಿದ್ದು, ನರಿ ಹಾಗೂ ಕಾಗೆ ಯಾರು ಎಂಬುವುದನ್ನು ಕಂಡು ಹಿಡಿಯಬೇಕಿದೆ. ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ಮನೆಯವರೇ ಆಯ್ಕೆ ಮಾಡಿ ಸಿಂಹದ ಪಾತ್ರವನ್ನು ಒಬ್ಬರಿಗೆ ನೀಡಬೇಕಿದೆ. ಅದರಂತೆ ಮನೆಯವರೆಲ್ಲರೂ ಆಕ್ಟಿವಿಟಿ ರೂಮ್ನಲ್ಲಿ ಸರ್ಕಲ್ ಆಗಿ ಕುಳಿತು, ಕಿರೀಟವನ್ನು ಒಬ್ಬರಿಂದ ಇನ್ನೊಬ್ಬರ ತಲೆಗೆ ಹಾಕುತ್ತಾ ಹೋಗಬೇಕು. ಅದರಂತೆ 13ನೇದಾಗಿ ಯಾರ ತಲೆ ಮೇಲೆ ಬರುತ್ತದೋ ಅವರೇ ಸಿಂಹ ಪಾತ್ರವಾಗಲಿದ್ದಾರೆ.
ಇಲ್ಲಿ ಒಂದು ಟ್ವಸ್ಟ್ ಇದೆ. ಅಕ್ಕಪಕ್ಕ ಕೂತವರ ತಲೆ ಮೇಲೆ ಹಾಕದೇ ತಮ್ಮ ಇಷ್ಟದ ಹಾಗೂ ಸೂಕ್ತ ಕಾರಣದ ಅನುಸಾರ ಯಾರ ತಲೆ ಮೇಲೆ ಬೇಕಿದ್ದರೂ ಕೊಡಬಹುದು. ಅದರಂತೆ 13ನೇದಾಗಿ ಯಾರ ತಲೆ ಮೇಲೆ ಹಾಕುತ್ತಾರೋ ಅವರು ಸಿಂಹವಾಗಿ.. ಕಾಗೆ ಹಾಗೂ ನರಿ ಯಾರೆಂದು ಕಂಡುಹಿಡಿಯಬೇಕು.
ಪ್ರೋಮೋದಲ್ಲಿ ತೋರಿಸಿದಂತೆ ಈಗಾಗಲೇ ನರಿ ಪಾತ್ರದಲ್ಲಿರುವ ಯಶಸ್ ಅವರಿಗೆ ಸಿಂಹ ಪಾತ್ರವೂ ಸಿಕ್ಕಿದ್ದು, ಹೇಗೆ ನಿಭಾಯಿಸುತ್ತಾರೆ ಅಥವಾ ಯಶಸ್ ಅವರಿಗೆ ಎರಡು ಪಾತ್ರ ಸಿಕ್ಕಿರುವದರಿಂದ ಬಿಗ್ಬಾಸ್ ಪಾತ್ರ ಬದಲಿಸುತ್ತಾರಾ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಬದುಕಿನ ಸಂಧ್ಯಾಕಾಲದಲ್ಲಿ ಪ್ರೀತಿಯ ಬೆಳಕು – ವೃದ್ಧಾಶ್ರಮದಲ್ಲಿ 63ರ ವೃದ್ಧೆಯೊಂದಿಗೆ 75ರ ವೃದ್ಧನ ವಿವಾಹ
