LatestMain PostNational

ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆ- ವೆಲ್ಲೂರಿನಲ್ಲಿ ತೃತೀಯಲಿಂಗಿಗೆ ಗೆಲುವು

Advertisements

ಚೆನ್ನೈ: ತಮಿಳುನಾಡು ನಗರ  ಸ್ಥಳೀಯ ಚುನಾವಣೆಯಲ್ಲಿ ವೆಲ್ಲೂರ್‌ನಿಂದ ತೃತೀಯಲಿಂಗಿ ಗಂಗಾ ನಾಯಕ್, ಡಿಎಂಕೆ(Dravida Munnetra Kazhagam)ಯಿಂದ ಸ್ಪರ್ಧೆ ಮಾಡಿದ್ದು,  ಭರ್ಜರಿ ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.

ತಮಿಳುನಾಡು  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೆಲ್ಲೂರ್‌ನಿಂದ ಡಿಎಂಕೆಯ ತೃತೀಯಲಿಂಗಿ ಅಭ್ಯರ್ಥಿಯಾಗಿ 49 ವರ್ಷದ ಗಂಗಾ ನಾಯಕ್ ಸ್ಪರ್ಧೆ ಮಾಡಿದ್ದರು. ವೆಲ್ಲೂರು ಮುನ್ಸಿಪಲ್ ಕಾರ್ಪೊರೇಶನ್‌ ವಾರ್ಡ್ 37ರಲ್ಲಿ 2,131 ಮತಗಳನ್ನು ಪಡೆದು ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಗಂಗಾನಾಯಕ್ ವೆಲ್ಲೂರು ಮೂಲದ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ದಕ್ಷಿಣ ಭಾರತ ಟ್ರಾನ್ಸ್‌ಜೆಂಡರ್‌ ಅಸೋಸಿಯೇಷನ್‍ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಗಂಗಾ ಅವರು 15 ಮತಗಳ ಅಂತರದಿಂದ ಗೆಲುವು ಸಾಧಿಸಿ ಪಾಲಿಕೆಯ ಕೌನ್ಸಿಲರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

21 ಮುನ್ಸಿಪಲ್ ಕಾರ್ಪೊರೇಶನ್‌ಗಳು, 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯತ್‍ಗಳಲ್ಲಿ 12,838 ಸ್ಥಾನಗಳನ್ನು ಭರ್ತಿ ಮಾಡಲು 11 ವರ್ಷಗಳ ನಂತರ ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳು ಚುನಾವಣೆಗಳು ನಡೆಯಿತ್ತು. ಈ ಬಾರಿ ಚುನಾವಣೆಗೆ ತೃತೀಯಲಿಂಗಿ ಅಭ್ಯರ್ಥಿಗಳನ್ನು ಘೋಷಿಸಿದ್ದು ಡಿಎಂಕೆ ಮಾತ್ರವಲ್ಲ. ಬಿಜೆಪಿ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ತೃತೀಯಲಿಂಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ವರ್ಷ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು 15 ತೃತೀಯಲಿಂಗಿಯರು ಸ್ಪರ್ಧಿಸಿದ್ದಾರೆ. ಅವರಲ್ಲಿ ಹಲವರು ಸ್ವತಂತ್ರರಾಗಿ ಸ್ಪರ್ಧೆ ಮಾಡಿದ್ದರು. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

ಗಂಗಾ ನಾಯಕ್ ಯಾರು?: ವೆಲ್ಲೂರಿನಲ್ಲಿ ದಿನಗೂಲಿ ಕಾರ್ಮಿಕ ಕುಟುಂಬದಲ್ಲಿ ಜನಿಸಿದ ಗಂಗಾ ನಾಯಕ್ ಅವರು ತಮ್ಮ ಸಾಮಾಜಿಕ ಕೆಲಸ ಮತ್ತು ಸಮುದಾಯದ ಸೇವೆ ಮಾಡುತ್ತಾ ಮನ್ನಣೆ ಗಳಿಸಿದ್ದಾರೆ. 30 ತೃತೀಯಲಿಂಗಿಗಳು ಇರುವ ಇವರ ನಾಟಕ ತಂಡವೊಂದಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಗಂಗಾ ಮತ್ತು ಅವರ ತಂಡವು ವೆಲ್ಲೂರು ಮತ್ತು ತಮಿಳುನಾಡಿನ ಇತರ ಜಿಲ್ಲೆಗಳಲ್ಲಿ ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿದ್ದಾರೆ. 2022ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಲಿಂಗಾಯತ ಸಮುದಾಯದಿಂದ ಸ್ಥಾನವನ್ನು ಗೆದ್ದ ಏಕೈಕ ಅಭ್ಯರ್ಥಿಯಾಗಿದ್ದಾರೆ. ಗಂಗಾ ಕಳೆದ ಇಪ್ಪತ್ತು ವರ್ಷಗಳಿಂದ ಡಿಎಂಕೆ ಸದಸ್ಯೆಯಾಗಿದ್ದಾರೆ.

Leave a Reply

Your email address will not be published.

Back to top button