ಶಿಮ್ಲಾ: ಹಿಮಾಚಲ ಪ್ರದೇಶದ ನಾಲ್ಕು ಪುರಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು(Himachal Municipal Poll Results) ಬಿಜೆಪಿ ಮೂರು ಕಡೆ ಗೆಲುವು ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್ ಕೇವಲ ಪಾಲಂಪುರ್ ಪುರಸಭೆಯನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸೋಲನ್, ಮಂಡಿ ಹಾಗೂ ಧರ್ಮಶಾಲಾ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ(BJP) ಸ್ಪಷ್ಟ ಬಹುಮತ ಪಡೆದಿದೆ. ಪಾಲಂಪುರ್ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಬಿಜೆಪಿ ಮೇಲುಗೈ
17 ಸದಸ್ಯರ ಸೋಲನ್ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 10 ವಾರ್ಡ್ಗಳಲ್ಲಿ ಗೆದ್ದಿದೆ. ಕಾಂಗ್ರೆಸ್ 6 ವಾರ್ಡ್‌ಗಳಲ್ಲಿ ಜಯ ಸಾಧಿಸಿದ್ದು, ಒಂದು ಕಡೆ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಮಂಡಿಯ 14 ವಾರ್ಡ್‌ಗಳ ಪೈಕಿ ಬಿಜೆಪಿ 12, ಒಂದು ಕಡೆ ಕಾಂಗ್ರೆಸ್, ಮತ್ತೊಂದು ಸ್ಥಾನ ಪಕ್ಷೇತರ ಅಭ್ಯರ್ಥಿಗೆ ಲಭಿಸಿದೆ.
ಧರ್ಮಶಾಲಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17ರಲ್ಲಿ 11 ವಾರ್ಡ್‌ಗಳಲ್ಲಿ ಗೆದ್ದರೆ ಕಾಂಗ್ರೆಸ್ 5 ವಾರ್ಡ್‌ಗಳಲ್ಲಿ ಜಯಗಳಿಸಿದೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಗೆ ಸಿಕ್ಕಿದೆ. ಪಾಲಂಪುರ್ ಮಹಾನಗರ ಪಾಲಿಕೆಯ 15 ವಾರ್ಡ್‌ಗಳ ಪೈಕಿ 11 ರಲ್ಲಿ ಕಾಂಗ್ರೆಸ್, ಬಿಜೆಪಿ 4 ಕಡೆ ಜಯ ಸಾಧಿಸಿದೆ.
मंडी की जनता का हृदय से आभार और भाजपा के सभी विजेता पार्षद प्रत्याशियों को बधाई!
नगर निगम मंडी के संपूर्ण विकास के लिए भाजपा प्रतिबद्ध है, निश्चित रूप से जनता की अपेक्षाओं को नवनिर्वाचित भाजपा पार्षद प्राथमिकता से पूरा करेंगे।
-श्री जयराम ठाकुर (@jairamthakurbjp) जी, नेता… pic.twitter.com/wT8uKQaREB
— BJP Himachal Pradesh (@BJP4Himachal) May 31, 2026
ಕಾಂಗ್ರೆಸ್‌ಗೆ ಹಿನ್ನಡೆ
ಈ ಫಲಿತಾಂಶ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಜೈರಾಮ್ ಠಾಕೂರ್ ಹೇಳಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮತದಾರರನ್ನು ಸೆಳೆಯಲು ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಜನರು ಅದನ್ನು ತಿರಸ್ಕರಿಸಿದ್ದಾರೆ ಎಂದು ಜೈರಾಮ್ ಠಾಕೂರ್ ಸಂತಸ ಹಂಚಿಕೊಂಡಿದ್ದಾರೆ.
ಇತ್ತ ಕಾಂಗ್ರೆಸ್ ನಾಯಕರು ಸೋಲಿನ ಕಾರಣಗಳನ್ನು ಪರಿಶೀಲಿಸಲು ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಸೋಲನ್, ಮಂಡಿ ಹಾಗೂ ಧರ್ಮಶಾಲಾದಲ್ಲಿ ಬಿಜೆಪಿ ಗೆಲುವು ಪಕ್ಷದ ನಾಯಕರಾದ ರಾಜೀವ್ ಬಿಂದಾಲ್, ಜೈರಾಮ್ ಠಾಕೂರ್ ಹಾಗೂ ಸುಧೀರ್ ಶರ್ಮಾ ಅವರ ರಾಜಕೀಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
