ಅಹಮಾದಬಾದ್: ಐಪಿಎಲ್ ಫೈನಲ್‌ನಲ್ಲಿ (IPL Final) ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ರಜತ್ ಪಾಟಿದಾರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು 7 ಪಂದ್ಯಗಳು ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದಿದೆ. ಈ ಪೈಕಿ 4 ಪಂದ್ಯಗಳು ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿದ್ದರೆ 3 ಪಂದ್ಯಗಳು ಚೇಸಿಂಗ್ ಮಾಡಿ ಗೆದ್ದುಕೊಂಡಿವೆ.
ಈ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಮೂರು ಬಾರಿ ಮುಖಾಮುಖಿಯಾಗಿದ್ದು ಎರಡು ಪಂದ್ಯವನ್ನು ಆರ್‌ಸಿಬಿ ಗೆದ್ದಿದ್ದರೆ ಈ ಸ್ಟೇಡಿಯಂನಲ್ಲಿ ನಡೆದ 1 ಲೀಗ್ ಪಂದ್ಯವನ್ನು ಗುಜರಾತ್ ಗೆದ್ದುಕೊಂಡಿತ್ತು.
ಐಪಿಎಲ್‌ನ 42ನೇ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆರಿಸಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟ್ ಆಗಿತ್ತು ಚೇಸ್ ಮಾಡಿದ ಗುಜರಾತ್ 15.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಹೊಡೆದು ಜಯಗಳಿಸಿತ್ತು.
ಈ ಪಂದ್ಯದಲ್ಲಿ ಆರ್‌ಸಿಬಿ ಯಾವುದೇ ಬದಲಾವಣೆ ಮಾಡಿಲ್ಲ. ವೆಂಕಟೇಶ್ ಅಯ್ಯರ್ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ರೊಮಾರಿಯೋ
ಆರ್‌ಸಿಬಿ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ತ್ ಪಡಿಕ್ಕಲ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್ , ಭುವನೇಶ್ವರ್ ಕುಮಾರ್, ರಸೀಕ್ ದಾರ್.
ಇಂಪ್ಯಾಕ್ಟ್ ಸಬ್
ವೆಂಕಟೇಶ್ ಅಯ್ಯರ್, ಕಾನಿಷ್ಕ್ ಚೋಹನ್, ಸ್ವಪ್ನಿಲ್ ಸಿಂಗ್, ಅಭಿನಂದನ್ ಸಿಂಗ್, ಜೋರ್ಡಾನ್ ಕಾಕ್ಸ್
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್
ಇಂಪ್ಯಾಕ್ಟ್ ಸಬ್
ಪ್ರಸಿದ್ಧ್ ಕೃಷ್ಣ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕುಮಾರ್ ಕುಶಾಗ್ರಾ, ಸಾಯಿ ಕಿಶೋರ್
