– ಸಿಎಂ ಆಗ್ತಿರೋದು ನಾನಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತ!
ಬೆಂಗಳೂರು: ನನಗೆ ಯಾರೂ ಹೂವಿನ ಹಾರ ಹಾಕ್ಬೇಡಿ ಎಂದು ನಿಯೋಜಿತ ಸಿಎಂ ಡಿ.ಕೆ ಶಿವಕುಮಾರ್ (D.K. Shivakumar) ಅವರು ಪಕ್ಷದ (Congress) ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಕಾರ್ಯಕರ್ತರ ಉತ್ಸಾಹ ಗೊತ್ತಾಗುತ್ತದೆ. ಬೇರೆ ಬೇರೆ ವಿಷಯಗಳು ಇರೋದ್ರಿಂದ ಹೆಚ್ಚು ಜನರನ್ನು ಪ್ರಮಾಣ ವಚನದ ವೇಳೆ ಕರೆಸಲು ಆಗತ್ತಿಲ್ಲ. ಹೊರಗಡೆ ಬಂದು ನೋಡಿದ್ರೂ ಅಭ್ಯಂತರ ಇಲ್ಲ. ಯಾರೂ ನನಗೆ ಹೂವಿನ ಹಾರ ಹಾಕ್ಬೇಡಿ ಎಂದು ಮನವಿ ಮಾಡಿದ್ದಾರೆ.
ನನಗೆ ಅಲರ್ಜಿಯಾಗಲಿದೆ. ಬೇರೆ ಹೂವಿನ ಹಾರ ಸುಂಗಧರಾಜ ಹೂವಿನ ಹಾರಕ್ಕೆ ತಾಗಿರುತ್ತದೆ. ಇದರಿಂದ ಕಡಿತ ಉಂಟಾಗುತ್ತದೆ. ಯಾವ ಹೂವಿನ ಹಾರವನ್ನೂ ತರಬೇಡಿ. ಅದನ್ನೆಲ್ಲ ನಿಷೇಧ ಮಾಡಿದ್ದೇನೆ ಎಂದಿದ್ದಾರೆ.
ಸಿಎಂ ಆಗುತ್ತಿರೋದು ನಾನಲ್ಲ. ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಸಿಎಂ ಆಗ್ತಿರೋದು. ವಿದ್ಯಾರ್ಥಿ ದೇಸೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದರು. ಇದೇ ವೇಳೆ, ನಾನು ಸಿದ್ದರಾಮಯ್ಯ ಇಬ್ಬರೂ ನಾಳೆ ದೆಹಲಿಗೆ ಹೋಗುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
