ಕಳೆದ ವರ್ಷ ಕನ್ನಡ ಸಿನಿಮಾರಂಗಕ್ಕೆ ಚೈತನ್ಯ ತುಂಬಿದ್ದ ಚಿತ್ರ ಸು ಫ್ರಂ ಸೋ. ಇದೀಗ ಅದು ಮರಾಠಿಯಲ್ಲೂ ಬಿಡುಗಡೆ ಆಗಿದೆ. ಇದೇ ಸಂದರ್ಭದಲ್ಲಿ ಮತ್ತೆ ನೆನಪಿಸಲಾಗುತ್ತಿದೆ ಈ ಚಿತ್ರವನ್ನು. ಇನ್ನೇನು ಸಿನಿಮಾರಂಗದ ಕಥೆ ಮುಗೀತು ಎನ್ನುವಷ್ಟೊತ್ತಿಗೆ ಸು ಫ್ರಂ ಸೋ ಭರವಸೆಯ ಬೆಳಕಾಗಿ ಬಂತು. ಕಳೆದ ವರ್ಷ ಜುಲೈ 24ಕ್ಕೆ ರಿಲೀಸ್ ಆದ ಸು ಫ್ರಂ ಸೋ (Su From So) ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಕನ್ನಡ ಪ್ರೇಕ್ಷಕರು ಎಲ್ಲೂ ಕಳೆದೋಗಿಲ್ಲ ಎನ್ನುವುದನ್ನ ರಾಜ್ ಬಿ ಶೆಟ್ಟಿ (Raj B Shetty) ನಟನೆಯ ಸು ಫ್ರಂ ಸೋ ಸಿನಿಮಾ ನಿರೂಪಿಸಿತ್ತು.
ಈ ವರ್ಷವೂ ಅಂತದ್ದೊಂದು ಮ್ಯಾಜಿಕ್‌ಗೆ ಅದೇ ದಿನ ಸಜ್ಜಾಗಿರುವುದು ವಿಶೇಷ. ಸು ಫ್ರಂ ಸೋ ರಿಲೀಸ್ ಆದ ದಿನವೇ ಜುಲೈ 24ಕ್ಕೆ ಮತ್ತೊಂದು ಭರವಸೆಯ ಸಿನಿಮಾ ಕರಾವಳಿ ತೆರೆ ಕಾಣುತ್ತಿದೆ. ಗುರುದತ್ ಗಾಣಗ ನಿರ್ದೇಶನದ ರಾಜ್ ಬಿ ಶೆಟ್ಟಿ, ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ (Karavali Movie) ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಜುಲೈ 24ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಇದನ್ನೂ ಓದಿ: ಕರಾವಳಿ & ಮಲೆನಾಡು ಪ್ರವಾಸೋದ್ಯಮ ಬ್ರಾಂಡ್ ಅಂಬಾಸಿಡರ್ ಆಗಿ ರಿಷಬ್ ಶೆಟ್ಟಿ ನೇಮಕ
ಈಗಾಗಲೇ ಪೋಸ್ಟರ್ ಮತ್ತು ಟೀಸರ್‌ಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕರಾವಳಿ ಕೊನೆಗೂ ತೆರೆಗೆ ಬರುತ್ತಿದೆ. ಸು ಫ್ರಂ ಸೋ ಹಾಗೆಯೇ ಕರಾವಳಿ ಕೂಡ ಚಿತ್ರರಂಗಕ್ಕೆ ಗೇಮ್ ಚೇಂಜರ್ ಆಗಲಿದೆ ಎನ್ನುವ ಭರವಸೆ ಮೂಡಿಸಿದೆ. ಕಳೆದ ವರ್ಷ ಜುಲೈ ತಿಂಗಳು ಕನ್ನಡ ಸಿನಿಮಾರಂಗ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿತ್ತು. ಸು ಫ್ರಂ ಸೋ, ಎಕ್ಕ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದವು. ಈ ವರ್ಷದ ಜುಲೈ ಕೂಡ ಕನ್ನಡ ಸಿನಿಮಾರಂಗದ ಕಳೆ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ. ಕರಾವಳಿ ಹೆಸರೇ ಹೇಳುವ ಹಾಗೆ ಅಲ್ಲಿನ ಸಂಸ್ಕೃತಿ, ಸೊಗಡಿನ ಬಗ್ಗೆ ಇರುವ ಸಿನಿಮಾ. ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ಸಂಪದಾ ನಟಿಸಿದ್ದಾರೆ. ಇನ್ನೂ ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಸೇರಿದಂತೆ ದೊಡ್ಡ ತಾರಾಬಳಗವಿದೆ.
ಕರಾವಳಿ, ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಸಚಿನ್ ಬಸ್ರೂರು ಸಂಗೀತ, ಅಭಿಮನ್ಯೂ ಸದಾನಂದನ್ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಇದನ್ನೂ ಓದಿ: ಕಾಕ್‌ಟೇಲ್ 2ನಲ್ಲಿ ರಶ್ಮಿಕಾ ಮೂಲೆಗುಂಪು – ರೊಚ್ಚಿಗೆದ್ರು ಫ್ಯಾನ್ಸ್
