ಬಿಗ್ಬಾಸ್ 13ರ (Bigg Boss 13 Kannada) ಫಿನಾಲೆಗೆ ಇನ್ನೂ ಕೆಲವೇ ವಾರಗಳು ಬಾಕಿ. ಈ ಸಮಯದಲ್ಲಿ ಆಟ ಟಫ್ ಆಗೋದಂತೂ ಪಕ್ಕಾ. ಹೀಗಿರುವಾಗ ಬಿಗ್ಬಾಸ್ ನೀಡುವ ಟ್ವಿಸ್ಟ್ ಆಟದ ಸ್ಟೈಲ್ ಅನ್ನೇ ಬದಲಿಸಿ ಬಿಡುತ್ತದೆ.
ಹೌದು.. ಕಳೆದ ವಾರ ಬಿಗ್ಬಾಸ್ ಯುವರಾಣಿಯರ ಟಾಸ್ಕ್ ನೀಡಿದ್ದರು. ತಮ್ಮ ಯುವರಾಣಿಯನ್ನು ಮಹಾರಾಣಿ ಮಾಡಲು ಮನೆಯವರೆಲ್ಲ ಟಾಸ್ಕ್ ಆಡಬೇಕಿತ್ತು. ಗೆದ್ದು ಮಹಾರಾಣಿಯಾದ ಗಾನವಿ (Ganavi) ಹಾಗೂ ಕಿಂಗ್ ಮೇಕರ್ ಆದ ಗಗನ್ಗೆ (Gagan) ಬಿಗ್ಬಾಸ್ ಅಧಿಕಾರವೊಂದನ್ನು ನೀಡಿದ್ದು.. ಇವರಿಬ್ಬರ ನಿರ್ಧಾರ ಇನ್ನೋರ್ವ ಸ್ಪರ್ಧಿಯ ಆಟವನ್ನೇ ಬದಲಿಸಲಿದೆ. ಇದನ್ನೂ ಓದಿ:ಬಿಗ್ಬಾಸ್ ಮನೆಯಿಂದ ಮಂಜ ಔಟ್
ಇಡೀ ಸೀಸನ್ nominate ಆಗೋದು ಯಾರು?
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/mBbI6HqUga
— Colors Kannada (@ColorsKannada) November 23, 2026
ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಅದರಲ್ಲಿ ಆಕ್ಟಿವಿಟಿ ರೂಮ್ ಅನ್ನು ಕಾಡಿನಂತೆ ಅಲಂಕರಿಸಲಾಗಿದ್ದು, ಅದಕ್ಕೆ ಪವರ್ ರೂಮ್ ಎಂದು ಹೆಸರಿಡಲಾಗಿದೆ. ಮಹಾರಾಣಿ ಗಾನವಿ ಹಾಗೂ ಕಿಂಗ್ ಮೇಕರ್ ಆದ ಗಗನ್ಗೆ ಬಿಗ್ಬಾಸ್ ಮುಂದಿನ ವಾರವೂ ಕ್ಯಾಪ್ಟನ್ ಆಗಿ ಆಯ್ಕೆ ಆಗಬೇಕು ಎಂದರೆ ಅರ್ಹತೆ ಇಲ್ಲದ ಒಬ್ಬರನ್ನು ಆಯ್ಕೆ ಮಾಡಬೇಕು ಎಂದು ಹೇಳುತ್ತಾರೆ.
ಖುಷಿಯಲ್ಲಿ ಗಗನ್ ಹಾಗೂ ಗಾನವಿ ಹೌದು ಎಂದಾಗ, ಬಿಗ್ಬಾಸ್ ನೀವು ಆಯ್ಕೆ ಮಾಡುವ ಓರ್ವ ಸದಸ್ಯ ಇಡೀ ಸೀಸನ್ ಪೂರ್ತಿ ನಾಮಿನೇಟ್ ಆಗುತ್ತಾರೆ ಎನ್ನುತ್ತಾರೆ. ಈ ವಿಷಯ ತಿಳಿದು ಇಡೀ ಮನೆಯವರು ಶಾಕ್ ಆಗುತ್ತಾರೆ. ಕೊನೆಯಲ್ಲಿ ಮೊದಲ ದ್ರೋಹ ಈಗಾಗಲೇ ನಡೆದಿದೆ ಎನ್ನುತ್ತಾರೆ ಬಿಗ್ಬಾಸ್ ಇದನ್ನೂ ಓದಿ: ʻಐಶಿರ್ʼ ನಿಶ್ಚಿತಾರ್ಥದಲ್ಲಿ ಎಲ್ಲೆಲ್ಲೂ ಶಿವನ ಥೀಮ್ – ವಿಶೇಷ ವಿನ್ಯಾಸದಲ್ಲಿ ಮಿಂಚಿದ ಜೋಡಿ
ಇದನ್ನು ಕೇಳಿಸಿಕೊಂಡ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿ ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾ ಕುಳಿತುಬಿಡುತ್ತಾರೆ. ಗಾನವಿ ಹಾಗೂ ಗಗನ್ ಕೊಟ್ಟ ಅಧಿಕಾರವನ್ನು ಯಾವ ರೀತಿ ಬಳಸಿಕೊಂಡು ಯಾರನ್ನು ಆಯ್ಕೆ ಮಾಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: `ಫೈರ್’ನಂತಿದ್ದ ಮಹಾಕವಿ ಮಂಜ ಮನಸ್ಸನ್ನ `ಫ್ಲವರ್’ ಮಾಡಿದ ಗಾನವಿ

