`ಪೆದ್ದಿ’ ಚಿತ್ರದಲ್ಲಿ ಜಾಹ್ನವಿ ಕಪೂರ್ ಪಾತ್ರಕ್ಕೆ ಆದ್ಯತೆ ನೀಡದೆ ಗ್ಲ್ಯಾಮರ್ ಬೊಂಬೆ ರೀತಿ ತೋರಿಸಿದ್ದಕ್ಕೆ ಜಾಹ್ನವಿ ಫ್ಯಾನ್ಸ್ ಆಕ್ರೋಶಗೊಂಡಿರುವ ಘಟನೆ ಇನ್ನೂ ಜನ ಮರೆತಿಲ್ಲ. ಇದೀಗ ಅಂಥದ್ದೇ ಒಂದು ಪರಿಸ್ಥಿತಿ ರಶ್ಮಿಕಾ ಎದುರಿಸುತ್ತಿದ್ದಾರೆ.
ಶಾಹಿದ್ ಕಪೂರ್, ಕೃತಿ ಸನೂನ್ ಜೊತೆ ರಶ್ಮಿಕಾ ಅಭಿನಯಿಸಿರುವ ಕಾಕ್‌ಟೇಲ್2 ಚಿತ್ರ ರಿಲೀಸ್ ಆಗಿದ್ದು, ರಶ್ಮಿಕಾ ಪಾತ್ರವನ್ನು ಇಲ್ಲಿ ಅಸಡ್ಡೆ ಮಾಡಲಾಗಿದೆ ಅನ್ನೋದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ಮೂಲಕ ರಶ್ಮಿಕಾಗೆ ಅವಮಾನ ಮಾಡಲಾಗಿದೆ ಎಂಬ ಆಕ್ರೋಶದ ಅಲೆ ಎದ್ದಿದೆ. ಇದನ್ನೂ ಓದಿ: ನಾಟ್ಯ ಮಯೂರಿಯಾದ ನಿವೇದಿತಾ – ಮುದ್ದಾದ ನವಿಲಿಗೆ ಫ್ಯಾನ್ಸ್ ಫಿದಾ!
`ಕಾಕ್‌ಟೇಲ್ 2′ ಚಿತ್ರದ ವಿರ್ಮರ್ಷೆ ಹೊರಬಿದ್ದಿದೆ. ಇಲ್ಲಿ ಕೃತಿಯ ಅಭಿನಯ ಹಾಗೂ ಪಾತ್ರಕ್ಕಾಗಿ ಸಿಕ್ಕಿರೋ ಸ್ಕೋಪ್ ಬಗ್ಗೆ ಹೊಗಳಿಕೆ ಬಂದಿದೆ. ಇಲ್ಲಿ ರಶ್ಮಿಕಾ ಪಾತ್ರವನ್ನ ಸರಿಯಾಗಿ ತೋರಿಸದೆ, ಉತ್ತಮ ಅವಕಾಶವನ್ನೂ ಕೊಡಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡವನ್ನ ಜರಿಯುವ ಕೆಲಸ ಆಗ್ತಿದೆ.
ಜೊತೆ ಜೊತೆಗೆ ರಶ್ಮಿಕಾ ಪಾತ್ರಕ್ಕೆ ನೆಗೆಟಿವ್ ದಾಳಿ ಪ್ರಹಾರ ಆರಂಭವಾಗಿದ್ದು ಅವರ ಹಿಂದಿ ಭಾಷೆಯ ಉಚ್ಛಾರಣೆ, ಪರ್ಫಾಮೆನ್ಸ್ ಚೆನ್ನಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಂದಹಾಗೆ ರಶ್ಮಿಕಾಗೆ ಇದೇ ಮೊದಲ ಬಾಲಿವುಡ್ ಸಿನಿಮಾ ಅಲ್ಲ. ಆನಿಮಲ್ ಚಿತ್ರದ ಅಭಿನಯಕ್ಕೆ ರಶ್ಮಿಕಾ ಬಲು ಮೆಚ್ಚುಗೆ ಪಡೆದುಕೊಂಡಿದ್ರು. ಆದರೀಗ ಆಗಿನ ಪರಿಸ್ಥಿತಿಯೇ ಉಲ್ಟಾ ಆಗಿದೆ. ರಶ್ಮಿಕಾ ಪಾತ್ರ ಇಷ್ಟು ಕಳಪೆ ಆಗಿ ಮೂಡಿ ಬರೋದಕ್ಕೆ ಕಾರಣ ಚಿತ್ರತಂಡವೇ ಎಂದು ಪ್ಯಾನ್ ಇಂಡಿಯಾ ಕ್ರಶ್ ರಶ್ಮಿಕಾ ಫ್ಯಾನ್ಸ್ ಕಿಡಿ ಕಾರುತ್ತಿದ್ದಾರೆ. ಇದನ್ನೂ ಓದಿ: ಶರ್ಮಿಳಾ ಮಾಂಡ್ರೆ ಮದ್ವೆ: ಹಾರ್ಟ್ ಬ್ರೇಕ್ ಸಿಂಬಲ್ ಹಾಕಿದ ಡೈರೆಕ್ಟರ್
