ಕನ್ನಡದ ನಾಯಕಿ, ನಿರ್ಮಾಪಕಿ ಶರ್ಮಿಳಾ ಮಾಂಡ್ರೆ (Sharmiela Mandre) ಅವರ ಮದುವೆ ಫಿಕ್ಸ್ ಆಗಿದೆ. ತಮಿಳು ನಿರ್ಮಾಪಕನ ಜೊತೆ ಶೀಘ್ರದಲ್ಲೇ ಅವರು ಮದುವೆ ಆಗಲಿದ್ದಾರೆ. ಈ ಸುದ್ದಿ ಕನ್ನಡದ ಹೆಸರಾಂತ ನಿರ್ದೇಶಕನ ಹಾರ್ಟ್ ಬ್ರೇಕ್ ಮಾಡಿದೆ. ಅದನ್ನು ಸ್ವತಃ ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಹರಿದು ಬಂದಿವೆ.

ಲೂಸಿಯಾ ಸಿನಿಮಾ ಮೂಲಕ ಭರವಸೆ ಮೂಡಿಸಿದವರು ನಿರ್ದೇಶಕ ಪವನ್ ಕುಮಾರ್. ಆನಂತರ ಒಳ್ಳೊಳ್ಳೆ ಕಂಟೆಂಟ್ ಇರುವಂಥ ಚಿತ್ರಗಳನ್ನು ಮಾಡಿದರು. ಕೆಲವು ಚಿತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಗಾಳಿಪಟ 2 ಸಿನಿಮಾ ಕೂಡ ಒಂದು. ಈ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ ಜೊತೆ ಪವನ್ ನಟಿಸಿದ್ದಾರೆ. ಇದೇ ಕಾರಣದಿಂದಾಗಿ ಹಾರ್ಟ್ ಬ್ರೇಕ್ ಸಿಂಬಲ್ ಒತ್ತಿದ್ದಾರೆ. ಇದನ್ನೂ ಓದಿ: ನಿರ್ಮಾಪಕನ ಜೊತೆ ನಟಿ ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್

ಗಾಳಿಪಟ 2 ಸಿನಿಮಾದಲ್ಲಿ ಪ್ರೊಫೇಸರ್ ಪಾತ್ರ ಮಾಡಿದ್ದವರು ಶರ್ಮಿಳಾ ಮಾಂಡ್ರೆ. ಆ ಪಾತ್ರವನ್ನು ವಿದ್ಯಾರ್ಥಿಯಾಗಿದ್ದ ಪವನ್ ಪ್ರೀತಿಸುತ್ತಾ ಇರುತ್ತಾನೆ. ಕೊನೆಗೆ ಪ್ರೊಫೇಸರ್ ಶರ್ಮಿಳಾನ್ನು ಮದುವೆ ಆಗೋದು ಬೇರೊಬ್ಬರು. ಆ ಪಾತ್ರವನ್ನು ಇಟ್ಟುಕೊಂಡೇ ಪವನ್ ಈ ರೀತಿ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಪವನ್ ಹಾರ್ಟ್ ಬ್ರೇಕ್ ಸಿಂಬಲ್ ಹಾಕಿದ್ದು ಕೇವಲ ತಮಾಷೆಗಾಗಿ. ಆದರೆ, ಅನೇಕರು ನಾನಾ ರೀತಿಯ ಕಾಮೆಂಟ್ ಮಾಡಿ, ಪವನ್‌ಗೆ ಸಮಾಧಾನ ಹೇಳಿದ್ದಾರೆ. ಕೆಲವರಂತೂ ಕೂಡಲೇ ಯೋಗರಾಜ್ ಭಟ್ ಅವರನ್ನು ಭೇಟಿ ಮಾಡಿ, ಬೇರೆ ಮಾರ್ಗವನ್ನು ಅವರು ಹುಡುಕಬಹುದು ಅಂತ ಗೇಲಿ ಮಾಡಿದ್ದಾರೆ.ಇದನ್ನೂ ಓದಿ: ಒಂದಂತದಲ್ಲಿ ‘ತಾರಾ ಪಟ್ಟ’ದ ಮೋಡಿಗೆ ವ್ಯಸನಿಯಾಗಿದ್ದೆ – ನ್ಯೂನ್ಯತೆ ಮೆಟ್ಟಿನಿಂತ ಸಮಂತಾ!
