ಅನೇಕ ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಶರ್ಮಿಳಾ ಮಾಂಡ್ರೆಗೆ (Sharmiela Mandre) ಇದೀಗ ಕಂಕಣ ಬಲ ಕೂಡಿಬಂದಿದೆ. ಮದುವೆ ನಿಶ್ಚಯವಾಗಿದ್ದು, ಇದೇ ಜೂನ್ 25 ರಂದೇ ನಿಶ್ಚಿತಾರ್ಥ ನಡೆಯಲಿದೆ.
ನಟಿ ಶರ್ಮಿಳಾ ಮಾಂಡ್ರೆ ಅವರು ಜೀವನ ಸಂಗಾತಿಯನ್ನಾಗಿ ಚಿತ್ರೋದ್ಯಮಿಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ತಮಿಳಿನ ಖ್ಯಾತ ನಿರ್ಮಾಪಕ (Tamil Producer) ಸುಧನ್ ಸುಂದರಂ (Sudhan Sundaram) ಜೊತೆ ಶರ್ಮಿಳಾ ಮಾಂಡ್ರೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಮಾಧುರಿ ದೀಕ್ಷಿತ್ ಎದುರು ನೃತ್ಯ ಮಾಡಲು ಹೆದರುತ್ತಿದ್ದ ನಟಿಯರು – ಕರೀಷ್ಮಾ ಎದುರಿಸಿದ್ಹೇಗೆ ಸವಾಲು?

ಸುಧನ್ ಸುಂದರಂ ತಮಿಳಿನ ಯಶಸ್ವಿ ನಿರ್ಮಾಪಕಲ್ಲೊಬ್ಬರು. `ಪ್ಯಾಷನ್ ಸ್ಟುಡಿಯೋಸ್’ ನಿರ್ಮಾಣ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಬ್ಲಾಕ್‌ಬಸ್ಟರ್ `ಮಹಾರಾಜ’, `ತಾಯ್ ಕಿಳವಿ’ ಮತ್ತು `ಅನ್ನಾಬೆಲ್ಲೆ ಸೇತುಪತಿ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಇನ್ನು ತಮಿಳಿನಲ್ಲಿ ಚಿತ್ರ ನಿರ್ಮಿಸಿರುವ ಶರ್ಮಿಳಾಗೆ ಭಾವೀ ಪತಿ ಅದೇ ಇಂಡಸ್ಟ್ರಿಯಲ್ಲೇ ಪರಿಚಯವಾದಂತೆ ಕಾಣುತ್ತೆ. `ಸಜನಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶರ್ಮಿಳಾ ಇದೀಗ ನಟನೆ ಜೊತೆ ಚಿತ್ರ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಬೋಲ್ಡ್ & ಬ್ಯೂಟಿಗೆ ಹೆಸರಾಗಿರುವ ಶರ್ಮಿಳಾ ಮಾಂಡ್ರೆ ಇದೀಗ ತಮಿಳುನಾಡಿನ ಸೊಸೆಯಾಗುತ್ತಿದ್ದಾರೆ. ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಒಂದಂತದಲ್ಲಿ ‘ತಾರಾ ಪಟ್ಟ’ದ ಮೋಡಿಗೆ ವ್ಯಸನಿಯಾಗಿದ್ದೆ – ನ್ಯೂನ್ಯತೆ ಮೆಟ್ಟಿನಿಂತ ಸಮಂತಾ!

