– 13 ವರ್ಷಗಳ ಬಳಿಕ ದಂಡದ ಮೊತ್ತ ಪರಿಷ್ಕರಣೆ
ನವದೆಹಲಿ: ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಇಲಾಖೆ ಬಿಸಿ ಮುಟ್ಟಿಸಲು ಮುಂದಾಗಿದೆ. ಜುಲೈ 1ರಿಂದಲೇ ಹೊಸ ನಿಯಮ ಜಾರಿಯಾಗುತ್ತಿದ್ದು, ಟಿಕೆಟ್‌ರಹಿತ ಪ್ರಯಾಣ ಸೇರಿದಂತೆ ಹಲವು ಉಲ್ಲಂಘನೆಗಳಿಗೆ ದುಪ್ಪಟ್ಟು ದಂಡ ವಿಧಿಸಲು ರೈಲ್ವೆ ಇಲಾಖೆ ( Railway Department) ನಿರ್ಧರಿಸಿದೆ.
ಇದುವರೆಗೆ ಟಿಕೆಟ್ (Railway rules) ಇಲ್ಲದೆ ಪ್ರಯಾಣ ಮಾಡಿದರೆ ಟಿಕೆಟ್ ದರದ (Ticket price) ಜೊತೆಗೆ 250 ರೂ. ದಂಡ ( Ticket penalty) ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಟಿಕೆಟ್ ದರದ ಜೊತೆಗೆ 500 ರೂ. ದಂಡ ಪಾವತಿಸಬೇಕಾಗುತ್ತದೆ.
ಸುಮಾರು 13 ವರ್ಷಗಳ ಬಳಿಕ ರೈಲ್ವೆ ಇಲಾಖೆ ದಂಡದ ಮೊತ್ತವನ್ನು ಪರಿಷ್ಕರಿಸಿದೆ. ಪ್ರಯಾಣಿಕರಲ್ಲಿ ಶಿಸ್ತು ಮೂಡಿಸುವುದು ಮತ್ತು ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಮಹಿಳಾ ಕೋಚ್‌ಗೆ ಅನಧಿಕೃತವಾಗಿ ಪ್ರವೇಶಿಸುವ ಪುರುಷ ಪ್ರಯಾಣಿಕರಿಗೆ 2,500 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ರೈಲ್ವೆ ಆವರಣದಲ್ಲಿ ಪರವಾನಗಿ ಇಲ್ಲದೇ ವ್ಯಾಪಾರ ನಡೆಸುವುದು ಅಥವಾ ಭಿಕ್ಷೆ ಬೇಡುವುದಕ್ಕೂ 2,000 ರೂ. ದಂಡ ವಿಧಿಸಲಾಗುತ್ತದೆ. ನಿಷೇಧಿತ ವಸ್ತುಗಳನ್ನ ಸಾಗಿಸುವವರಿಗೆ 10,000 ರೂ. ವರೆಗೆ ದಂಡ ವಿಧಿಸುವ ಅವಕಾಶವಿದೆ. ರೈಲು ಅಥವಾ ರೈಲ್ವೆ ನಿಲ್ದಾಣಕ್ಕೆ ಅನಧಿಕೃತವಾಗಿ ಪ್ರವೇಶಿಸಿದರೆ 500 ರೂ. ದಂಡ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ನಾಳೆ NEET-UG ಮರುಪರೀಕ್ಷೆ, ಇಂದು ಮೆಗಾ ಮಾಕ್‌ಡ್ರಿಲ್ – 15,000 ಅರೆಸೈನಿಕ ಸಿಬ್ಬಂದಿ ಪತ್ರಿಕೆ ರವಾನೆ
ಕುಡಿದು ಗಲಾಟೆ ಮಾಡಿದರೆ 24 ಗಂಟೆಗಳವರೆಗೆ ಜೈಲು ಶಿಕ್ಷೆ, 1,000 ರೂ. ದಂಡ ಅಥವಾ ಸಮುದಾಯ ಸೇವೆ ವಿಧಿಸಬಹುದು. ಅಶ್ಲೀಲ ವರ್ತನೆ ತೋರಿದರೆ ಅಥವಾ ಸಹ ಪ್ರಯಾಣಿಕರಿಗೆ ಕಿರುಕುಳ ನೀಡಿದರೆ 1,000 ರೂ. ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಇದನ್ನೂ ಓದಿ: VPN ಬಳಸಿ ಟೆಲಿಗ್ರಾಂನಲ್ಲಿ ನೀಟ್ ಮರುಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆ ಹಂಚಿಕೆ – 19 ವರ್ಷದ ವಿದ್ಯಾರ್ಥಿ ಅರೆಸ್ಟ್
ಪ್ರಯಾಣಿಕರ ಸುರಕ್ಷತೆ ಮತ್ತು ವ್ಯವಸ್ಥಿತ ಪ್ರಯಾಣಕ್ಕಾಗಿ ಈ ಕ್ರಮಗಳನ್ನು ಜಾರಿಗೆ ತರಲಾಗಿದೆ. ದಂಡ ಪಾವತಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿದ್ದರೆ ಜೈಲು ಶಿಕ್ಷೆಯನ್ನೂ ಎದುರಿಸಬೇಕಾಗಬಹುದು ರೈಲ್ವೆ ಅಧಿಕಾರಿಗಳ ತಿಳಿಸಿದ್ದಾರೆ.
