ಬೆಂಗಳೂರು: ಸುಳ್ಳು ಅಟ್ರಾಸಿಟಿ ಕೇಸ್ (ಜಾತಿನಿಂದನೆ ಪ್ರಕರಣ) ದಾಖಲು ಮಾಡಿ ಕಿರುಕುಳ ನೀಡ್ತಿರೋ ಆರೋಪದಲ್ಲಿ ಮೇಲೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಡುಗೋಡಿ (Bengaluru Kadugodi) ಚನ್ನಸಂದ್ರದಲ್ಲಿ ನಡೆದಿದೆ.
ಪಾಪಣ್ಣ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿಡಿಯೋ ಮಾಡಿಟ್ಟು ನಯನಾ ಎಂಬಾಕೆ ವಿರುದ್ಧ ಹಣಕ್ಕೆ ಬೇಡಿಕೆಯಿಟ್ಟ ಆರೋಪವನ್ನೂ ಮಾಡಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ 2 ಲಾರಿಗಳು
ʻನಯನಾ ಎಂಬ ಮಹಿಳೆ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ದಾಖಲು ಮಾಡಿಸಿ 10 ಲಕ್ಷ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇವರಿಂದ ನಮ್ಮ ಕುಟುಂಬವನ್ನು, ನನ್ನ ತಂಗಿಯನ್ನು ಕಾಪಾಡಿʼ ಎಂದು ಪಾಪಣ್ಣ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಾಳೆ NEET-UG ಮರುಪರೀಕ್ಷೆ, ಇಂದು ಮೆಗಾ ಮಾಕ್‌ಡ್ರಿಲ್ – 15,000 ಅರೆಸೈನಿಕ ಸಿಬ್ಬಂದಿ ಪತ್ರಿಕೆ ರವಾನೆ
ಈ ಹಿಂದೆ 2021 ರಲ್ಲಿ ಅಟ್ರಾಸಿಟಿ ಕೇಸ್ ಹಾಕಿದ್ರು, ಕೇಸ್ ವಾಪಸ್ ಪಡೆಯಲು 10 ಲಕ್ಷದವರೆಗೂ ಪಡೆದಿದ್ದರು. ಈಗ ಮತ್ತೊಂದು ಬಾರಿ ಫೇಕ್ ಕೇಸ್ ಹಾಕಿ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದಾರೆ. ನಾನೊಬ್ಬ ಬಡ ವ್ಯಾಪಾರಿ, ಮನೆಯಲ್ಲಿ ಬೇರೆ ಯಾರೂ ಕೆಲಸಕ್ಕೆ ಹೋಗಲ್ಲ. ಈ ರೀತಿ ಫೇಕ್ ಕೇಸ್ ಹಾಕಿ ಹಣ ಮಾಡ್ತಿದ್ದಾರೆ. ಪೊಲೀಸರು ನಯನಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಪಣ್ಣ ಆತ್ಮಹತ್ಯೆಗೂ ಮುನ್ನ ವಿಡಿಯೋನಲ್ಲಿ ಮನವಿ ಮಾಡಿದ್ದಾರೆ.
ಮೃತ ಪಾಪಣ್ಣ ಅವರ ತಂಗಿ ಭಾಗ್ಯಶ್ರೀ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿ, ಜೋಗಿ ಸೀನಾ, ಪ್ರಶಾಂತ್, ಸಂತೋಷ್ ಎಂಬವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇದನ್ನೂ ಓದಿ: ಕೇರಳದಿಂದ ಬಂಡೀಪುರ ತಗಾದೆ – ರಾತ್ರಿ ಸಂಚಾರ ನಿಷೇಧ ತೆರವಿಗೆ ಮಾತುಕತೆ; ಡಿಕೆಶಿ ಸಕರಾತ್ಮಕ ಸ್ಪಂದನೆ
