ನಟಿ ಮೃಣಾಲ್ ಠಾಕೂರ್ (Mrunal Thakur) ಮತ್ತು ನಟ ಧನುಷ್ (Dhanush) ಮತ್ತೆ ಸುದ್ದಿಯಲ್ಲಿದ್ದಾರೆ. ಸೆಲೆಬ್ರಿಟಿಗಳಿಬ್ಬರೂ ಹಲವು ತಿಂಗಳಿಂದ ಡೇಟಿಂಗ್‌ನಲ್ಲಿದ್ದಾರೆ ಅನ್ನೋದು ವದಂತಿ ಹರಿದಾಡುತ್ತಲೇ ಇದ್ದವು. ಈ ಜೋಡಿ ಒಟ್ಟೊಟ್ಟಿಗೆ ಹಲವಾರು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ ಇಬ್ಬರು ಮುಂದಿನ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಅನ್ನೋದು ಮಾತುಗಳು ಕೇಳಿಬಂದಿತ್ತು. ಈ ಮಧ್ಯೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಧನುಷ್ ಜೊತೆಗೆ ನಟಿ ಮೃಣಾಲ್ ಠಾಕೂರ್ ಬ್ರೇಕಪ್ ಮಾಡಿಕೊಂಡಿದ್ದು, ಮದುವೆಗೂ (Wedding) ಮುನ್ನವೇ ಸಂಬಂಧ ಮುರಿದುಬಿದ್ದಿದೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: ಎಐ ಬಳಸಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಕೇಸ್ – ಮೂವರು ಅರೆಸ್ಟ್

ಮೃಣಾಲ್ ಮತ್ತು ಧನುಷ್ ಪರಸ್ಪರ ಒಪ್ಪಿಕೊಂಡೇ ದೂರವಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ ಬ್ರೇಕಪ್‌ಗೆ ನಿಖರ ಕಾರಣ ತಿಳಿದುಬಂದಿಲ್ಲ.
ಧನುಷ್ ಹಾಗೂ ಮೃಣಾಲ್ ಇಬ್ಬರ ಡೇಟಿಂಗ್ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ವದಂತಿಗಳು ಹರಿದಾಡುತ್ತಲೇ ಇತ್ತು. ಇದನ್ನೂ ಓದಿ: ಧನುಷ್ 55ನೇ ಚಿತ್ರ ‘ಓಂ’ ಟೀಸರ್ ರಿಲೀಸ್ – ಸಿನಿಮಾ ಬಿಡುಗಡೆ ಡೇಟ್ ರಿವೀಲ್

ಈ ವರ್ಷಾರಂಭದಲ್ಲಿ ಮೃಣಾಲ್ ಠಾಕೂರ್ ಪ್ರಮುಖ ಪಾತ್ರ ವಹಿಸಿದ್ದ `ಸನ್ ಆಫ್ ಸರ್ದಾರ್-2′ ಸಿನಿಮಾದ ಪ್ರೀಮಿಯರ್ ವೇಳೆ ಮೃಣಾಲ್ ಠಾಕೂರ್ ಮತ್ತು ಧನುಷ್ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. `ತೇರೆ ಇಷ್ಕ್ ಮೇ’ ಸಿನಿಮಾದ ಶೂಟಿಂಗ್ ಮುಗಿದಾಗಲೂ ಧನುಷ್ ಜೊತೆ ಮೃಣಾಲ್ ಠಾಕೂರ್ ಅವರು ಇದ್ದರು. ಧನುಷ್ ಅವರು ಸಹೋದರಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಕೂಡ ಮೃಣಾಲ್ ಅವರು ಫಾಲೋ ಮಾಡಲು ಆರಂಭಿಸಿದ್ದರು. ಈ ಎಲ್ಲ ಕಾರಣದಿಂದ ಧನುಷ್ ಮತ್ತು ಮೃಣಾಲ್ ಬಗ್ಗೆ ಡೇಟಿಂಗ್ ಗಾಸಿಪ್ ಹಬ್ಬಿತ್ತು.
ಸದ್ಯ ಈ ಜೋಡಿ ಈಗ ಪರಸ್ಪರ ಒಪ್ಪಿ ಬ್ರೇಕಪ್‌ಗೆ ಮುಂದಾಗಿರೋದು ಅವರ ನೆಚ್ಚಿನ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಇದನ್ನೂ ಓದಿ: ಕಾಕ್‌ಟೇಲ್ 2ನಲ್ಲಿ ರಶ್ಮಿಕಾ ಮೂಲೆಗುಂಪು – ರೊಚ್ಚಿಗೆದ್ರು ಫ್ಯಾನ್ಸ್
