ತಮಿಳು ನಟ ಧನುಷ್ ಅವರ 55ನೇ ಸಿನಿಮಾ ‘ಓಂ’ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಇದೇ ವರ್ಷದ ಅಕ್ಟೋಬರ್ 16ರಂದು ಚಿತ್ರ ತೆರೆಗೆ ಬರಲಿದೆ.
‘ಓಂ’ ಎಂದಾಕ್ಷಣ ಕನ್ನಡಿಗರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಸೂಪರ್ ಹಿಟ್ ಓಂ ಸಿನಿಮಾ ನೆನಪಾಗುತ್ತದೆ. 31 ವರ್ಷಗಳ ಹಿಂದೆ ಬಿಡುಗಡೆಯಾದ ಆ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಇದೀಗ ಅದೇ ಶೀರ್ಷಿಕೆಯಲ್ಲಿ ಧನುಷ್ ಹೊಸ ತಮಿಳು ಸಿನಿಮಾವೊಂದನ್ನು ಘೋಷಿಸಿದ್ದಾರೆ. ಆದರೆ ಈ ಸಿನಿಮಾದ ಕಥೆ ಸಂಪೂರ್ಣವಾಗಿ ವಿಭಿನ್ನವಾಗಿದ್ದು, ವಿಶೇಷ ಕಥಾಹಂದರವನ್ನು ಹೊಂದಿದೆ.
ಈ ಚಿತ್ರವನ್ನು ಅಮರನ್ ಖ್ಯಾತಿಯ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ. ಟೀಸರ್ ನೋಡಿದರೆ ಅಧಿಕಾರ, ಹಣ ಮತ್ತು ಕ್ರಾಂತಿಯ ಸುತ್ತ ಕಥೆ ಸಾಗುವ ಸುಳಿವು ಸಿಗುತ್ತದೆ.
ಓಂ ಕಾಲ್ಪನಿಕ ಕಥೆಯಾಗಿದ್ದರೂ, ಹಲವು ನೈಜ ಘಟನೆಗಳಿಂದ ಪ್ರೇರಣೆ ಪಡೆದಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಅಮರನ್ ಚಿತ್ರದ ಯಶಸ್ಸಿನ ಬಳಿಕ ರಾಜ್‌ಕುಮಾರ್ ಪೆರಿಯಸಾಮಿ ಮತ್ತು ಧನುಷ್ ಮತ್ತೆ ಕೈಜೋಡಿಸಿದ್ದಾರೆ.ಇದನ್ನೂ ಓದಿ: ನಾಟ್ಯ ಮಯೂರಿಯಾದ ನಿವೇದಿತಾ – ಮುದ್ದಾದ ನವಿಲಿಗೆ ಫ್ಯಾನ್ಸ್ ಫಿದಾ!
ಚಿತ್ರದಲ್ಲಿ ಧನುಷ್ ಜೊತೆ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2018ರ ಪೆರನ್ಬು ಚಿತ್ರದ ಬಳಿಕ ಮಮ್ಮುಟ್ಟಿ ಮತ್ತೆ ತಮಿಳು ಚಿತ್ರರಂಗಕ್ಕೆ ಮರಳುತ್ತಿರುವುದು ವಿಶೇಷ.
ಕನ್ನಡದ ಆಲ್‌ಟೈಮ್ ಹಿಟ್ ಸಿನಿಮಾ ‘ಓಂ’ ಹೆಸರಿನ ಈ ತೆಲುಗು ಸಿನಿಮಾ, ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಬರೆದಂತೆ ತಮಿಳಿನಲ್ಲೂ ಹಿಟ್ ಆಗೋ ಎಲ್ಲಾ ಲಕ್ಷಣಗಳು ಇವೆ ಎಂದು ಹೇಳುವ ಮೂಲಕ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತೆ ತಮಿಳಿಗೆ ಹಾರಿದ ರಿಯಲ್ ಸ್ಟಾರ್ ಉಪೇಂದ್ರ
