ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಕಳೆದ ವರ್ಷವಷ್ಟೇ ರಜನಿಕಾಂತ್(Rajinikanth) ನಟನೆಯ ಕೂಲಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮತ್ತೆ ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಉಪ್ಪಿ ನಟಿಸಲಿದ್ದಾರೆ. ಅಥರ್ವ ಈ ಸಿನಿಮಾದ ನಾಯಕನಾಗಿದ್ದು, ಉಪ್ಪಿಯದ್ದು ಮಹತ್ವದ ಪಾತ್ರವಂತೆ.
ಪರಭಾಷೆಯ ಸಿನಿಮಾಗಳಲ್ಲಿ ಉಪೇಂದ್ರ ನಟಿಸುವುದು ಹೊಸದೇನೂ ಅಲ್ಲ. ಈಗಾಗಲೇ ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಒಂದೂವರೆ ದಶಕದ ಬಳಿಕ ಕೂಲಿ ಚಿತ್ರವನ್ನು ಒಪ್ಪಿಕೊಂಡಿದ್ದರು. ಇದೀಗ ಒಂದೇ ವರ್ಷದ ಅಂತರದಲ್ಲಿ ಮತ್ತೊಂದು ಸಿನಿಮಾಗೆ ಉಪ್ಪಿ ಸಹಿ ಮಾಡಿದ್ದಾರೆ.
ಸದ್ಯಕ್ಕೆ ಕನ್ನಡದಲ್ಲಿ ಉಪೇಂದ್ರ ಎರಡೇ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಎರಡೂ ಚಿತ್ರಗಳ ಶೂಟಿಂಗ್ ಅರ್ಧಕ್ಕೆ ನಿಂತಿವೆ ಎಂದು ಹೇಳಲಾಗುತ್ತಿದೆ. ಮತ್ತೆ ನಿರ್ದೇಶಿಸುವ ಮನಸ್ಸು ಅವರು ಮಾಡುತ್ತಿಲ್ಲ. ಪ್ರಜಾಕೀಯದ ಚಟುವಟಿಕೆಗಳಲ್ಲಿ ಅವರು ಭಾಗಿಯಾಗಿದ್ದಾರಂತೆ. ಹಾಗಾಗಿ ಹೆಚ್ಚೆಚ್ಚು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವುದು ಅವರ ಆಪ್ತರ ಮಾತು. ಇದನ್ನೂ ಓದಿ: ಶರ್ಮಿಳಾ ಮಾಂಡ್ರೆ ಮದ್ವೆ: ಹಾರ್ಟ್ ಬ್ರೇಕ್ ಸಿಂಬಲ್ ಹಾಕಿದ ಡೈರೆಕ್ಟರ್
